SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024
ಜನಪ್ರಿಯ ಸಂಗೀತ ಸಂಯೋಜಕ ಎ ಆರ್ ರೆಹಮಾನ್ ದಾಂಪತ್ಯದಲ್ಲಿ ಬಿರುಕು ಮೂಡಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ತಮ್ಮ ಪತಿಯಿಂದ ವಿಚ್ಚೇದನ ಪಡೆಯುತ್ತಿರುವ ಬಗ್ಗೆ ಎ ಆರ್ ರೆಹಮಾನ್ ರವರ ಪತ್ನಿ ಸಾಯಿರಾ ಬಾನು ತಿಳಿಸಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ನಡುವೆ ಹಲವು ಭಿನ್ನಭಿಪ್ರಾಯಗಳು ಇರುವುದರಿಂದ ಈ ನಿರ್ಧಾರಕ್ಕೆ ಬಂದಿದ್ದೇವೆಂದು ಸಾಯಿರಾ ತಿಳಿಸಿದ್ದಾರೆ ಎನ್ನಲಾಗಿದೆ.
1995 ರಲ್ಲಿ ಎ ಆರ್ ರೆಹಮಾನ್ ಹಾಗು ಸಾಯಿರಾ ವಿವಾಹವಾಗಿದ್ದರು. ಖತೀಜಾ, ರಹೀಮಾ ಅಮೀನ್ ಹೆಸರಿನ ಮೂವರು ಮಕ್ಕಳನ್ನು ಹೊಂದಿರುವ ರಹಮಾನ್ ಸಂಸಾರದಲ್ಲಿ ವಿರಸಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಆದರೆ ಈ ಸಂಬಂಧ ಸಾಯಿರಾ ಬಾನು ತಮ್ಮ ವಕೀಲರ ಮೂಲಕ ನೀಡಿದ ಪ್ರಕಟಣೆಯ ವಿವರ ಹೀಗಿದೆ.
ಪ್ರಕಟಣೆಯಲ್ಲಿ ಏನಿದೆ..
ನಮ್ಮ ಕಕ್ಷಿದಾರರಾದ ಸಯಿರಾ ಬಾನು ಅವರು ತಮ್ಮ ಪತಿ ಎ.ಆರ್. ರಹಮಾನ್ ಅವರೊಂದಿಗಿನ ದಾಂಪತ್ಯ ಜೀವನದಿಂದ ಹೊರಬರಲು ನಿರ್ಧರಿಸಿದ್ದಾರೆ. ಇದು ಅವರ ವೈಯಕ್ತಿಕ ಜೀವನದಲ್ಲಿ ಉಂಟಾದ ವಿರಸದಿಂದ ಆಗುತ್ತಿರುವ ವಿಚ್ಛೇದನ. ಅಲ್ಲದೆ, ಇಬ್ಬರ ಸಾಂಸಾರಿಕ ಜೀವನದಲ್ಲಿ ಅನೇಕ ತೊಂದರೆಗಳು ಬಂದು ಹೋಗಿವೆ. ಇಬ್ಬರ ನಡುವೆ ಹಲವಾರು ಬಾರಿ ಮನಸ್ತಾಪಗಳಾಗಿವೆ. ಆ ಮನಸ್ತಾಪಗಳನ್ನು ದೂರ ಮಾಡಿಕೊಳ್ಳಲು ಇಬ್ಬರೂ ವಿಫಲರಾಗಿದ್ದಾರೆ. ಹಾಗಾಗಿ, ಸಾಯಿರಾ ಬಾನು ಅವರು ಅತೀವ ನೋವಿನಂದ ಹಾಗೂ ಸಂಕಟದಿಂದ ವಿಚ್ಛೇದನದ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ತಿಳಿಸಲಾಗಿದೆ.
SUMMARY | Ar Rahman’s wife Saira Banu has opened up about her separation from her husband.
KEY WORDS | Ar Rahman, Saira Banu, divorce, kannadanews.,