SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 11, 2025
ಶಿವಮೊಗ್ಗ ಜಿಲ್ಲಾ ಕಚೇರಿ ಮುಂಬಾಗದಲ್ಲಿರುವ ಆಟದ ಮೈದಾನದ ವಿಚಾರವಾಗಿ ಜಿಲ್ಲಾಧಿಕಾರಿಗಳ ನಿರ್ಧಾರ ಸರಿಯಿಲ್ಲ. ಈ ವಿಚಾರದ ಕುರಿತಾಗಿ ಲೋಕಾಯುಕ್ತರು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳನ್ನ ಭೇಟಿ ಮಾಡಿ ದೂರು ನೀಡಲಿದ್ದೇವೆ ಎಂದು ಮಾಜಿ ಡಿ ಸಿ ಎಂ ಕೆ ಎಸ್ ಈಶ್ವರಪ್ಪ ಹೇಳಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಿವಮೊಗ್ಗ ಮಹಾನಗರ ಪಾಲಿಕೆ ಆಟದ ಮೈದಾನದ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿತ್ತು. ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಜಿಕೆ ಮಿಥುನ್ ಕುಮಾರ್ ಮೈದಾನಕ್ಕೆ ಹಾಕಿದ್ದ ಬ್ಯಾರಿಕೇಡ್ ತೆಗೆದು ವಿವಾದ ಸುಖಾಂತ್ಯ ಕಂಡಿದೆ ಎಂದು ಹೇಳಿದ್ದಾರೆ. ಆದರೆ ಈಗಾಗಲೇ ನಾವು ಆ ಮೈದಾನಕ್ಕೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ ಎಂದು ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದ್ದೇವೆ. ಪಾಲಿಕೆ ಜಾಗವನ್ನು ಪಾಲಿಕೆಗೆ ನೀಡಬೇಕು ಆಕ್ರಮ ಖಾತೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕೆ ಎಂದು ಸಹ ಮನವಿ ಮಾಡಿದ್ದೇವೆ. ಇದರ ನಡುವೆ ಡಿಸಿಯವರು ಈ ಸಮಸ್ಯೆಯನ್ನು ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದಾರೆ. ನಾವು ಈ ಸಮಸ್ಯೆಯನ್ನು ಕೋರ್ಟ್ ನಲ್ಲಿ ಬಗೆಹರಿಸಿಕೊಳ್ಳುವುದಾದರೆ ನೀವು ಡಿಸಿಯಾಗಿ ಯಾಕೆ ಇರಬೇಕು ಎಂದು ಪ್ರಶ್ನಿಸಿದರು.
ಈ ವಿಚಾರವನ್ನು ಇಲ್ಲಿಗೆ ನಾವು ಕೈ ಬಿಡುವುದಿಲ್ಲ, ಮುಂದಿನ ಹೋರಾಟದ ಬಗ್ಗೆ ಸಹ ಕುಳಿತು ಚರ್ಚೆ ಮಾಡುತ್ತಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ದಾಖಲೆ ನೀಡಿದ್ದೇವೆ. ಮನವಿಗೆ ಸ್ಪಂದಿಸಿ ಸಮಸ್ಯೆ ಬಗೆ ಹರಿಸದೇ ಇದ್ದಲ್ಲಿ ಲೋಕಾಯುಕ್ತರನ್ನು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಯನ್ನು ಭೇಟಿ ಮಾಡಿ ದೂರು ನೀಡುತ್ತೇವೆ ಎಂದರು.
ರೈಲ್ವೆ ಇಲಾಖೆಯ ಕಂಬಿಗಳನ್ನು ತಂದು ಅಕ್ರಮವಾಗಿ ಬೇಲಿ ಹಾಕಿದ್ದವರ ಬಗ್ಗೆ ಜಿಲ್ಲಾ ರಕ್ಷಣಾ ಇಲಾಖೆ ಇನ್ನೂ ಕ್ರಮ ಕೈಗೊಂಡಿಲ್ಲ. ಇದರ ಬಗ್ಗೆ ನಾವು ಕೇಳಿದಾಗ ಎಸ್ಪಿಯವರು ನಮಗೆ ಯಾರು ದೂರು ಕೊಟ್ಟಿಲ್ಲ ಎನ್ನುತ್ತಾರೆ. ಬಾಂಗ್ಲಾದೇಶದ ಹಿಂದೂಗಳ ಮೇಲೆನ ದೌರ್ಜನ್ಯ ಖಂಡಿಸಿ ಶಿವಮೊಗ್ಗದಲ್ಲಿ ಭಾಷಣ ಮಾಡಿದಕ್ಕೆ ನನ್ನ ಮೇಲೆ ಸುಮೋಟೋ ಹಾಕಿದ್ರಿ. ಆದರೆ ಈ ವಿಚಾರದಲ್ಲಿ ಏಕೆ ಆ ರೀತಿಯ ಕ್ರಮ ಕೈಗೊಂಡಿಲ್ಲ. ಈ ಎಲ್ಲದರ ವಿಚಾರವಾಗಿ ಕಾನೂನು ಹೋರಾಟಕ್ಕೂ ಮುಂದಾಗುತ್ತೇವೆ, ದೊಡ್ಡ ಪ್ರತಿಭಟನೆ ಸಹ ಮಾಡ್ತೇವೆ ಎಂದರು.
SUMMARY | Former DCM K S Eshwarappa said he would meet the Lokayukta and high court judges and lodge a complaint on the issue.
KEYWORDS | K S Eshwarappa, Lokayukta, high court, idhga maidan, shivamogga,