shivamgoga | ಹಾಯ್‌ ಬ್ರೋ ಎಚ್ಚರಿಕೆ | ಆನ್‌ಲೈನ್‌ಗೆ ದುಡ್ಡು ಹಾಕಿ ಸಾವು ತಂದುಕೊಂಡ ಯುವಕ | whatsapp ಮೆಸೇಜ್‌ ಕಣ್ಣೀರು ಬರಿಸುತ್ತೆ

ಆನ್‌ ಲೈನ್‌ ಆಪ್‌ ನಂಬಿ ಮೋಸ ಹೋಗಿ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಯುವಕ ಸಾವನ್ನಪ್ಪಿದ್ದಾನೆ Shimoga: A youth died in Bhadravathi in Shivamogga district after being duped of an online app

shivamgoga  | ಹಾಯ್‌ ಬ್ರೋ ಎಚ್ಚರಿಕೆ | ಆನ್‌ಲೈನ್‌ಗೆ ದುಡ್ಡು ಹಾಕಿ ಸಾವು ತಂದುಕೊಂಡ ಯುವಕ | whatsapp ಮೆಸೇಜ್‌  ಕಣ್ಣೀರು ಬರಿಸುತ್ತೆ
ಶಿವಮೊಗ್ಗ ಜಿಲ್ಲೆ ಭದ್ರಾವತಿ, ಆನ್‌ ಲೈನ್‌ ಆ್ಯಪ್​​

SHIVAMOGGA | MALENADUTODAY NEWS | Aug 25, 2024 ಮಲೆನಾಡು ಟುಡೆ  

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಯುವಕನೊಬ್ಬ ಆನ್‌ ಲೈನ್‌ ಆ್ಯಪ್​​ ನ ಮೋಸದಿಂದಾಗಿ ಸಾವನ್ನಪ್ಪಿದ್ದಾನೆ. ಈತ ಆನ್‌ಲೈನ್‌ ಆ್ಯಪ್​​  ಸಂಸ್ಥೆಯೊಂದಿಗೆ ಚರ್ಚಿಸುವ ವಾಟ್ಸಾಪ್‌ ಸಂದೇಶಗಳು ನಿಜಕ್ಕೂ ಮನ ತಲ್ಲಣಗೊಳಿಸುತ್ತಿವೆ. ದಯವಿಟ್ಟು ನನ್ನ ದುಡ್ಡನ್ನ ವಾಪಸ್‌ ಕೊಡಿ ಎಂದು ಪರಿಪರಿಯಾಗಿ ಬೇಡಿದರೂ ಆ್ಯಪ್​​ ಸಂಸ್ಥೆ ಇನ್ನೊಂದಿಷ್ಟು ದುಡ್ಡು ಕಟ್ಟುವಂತೆ ಮತ್ತೆ ಮತ್ತೆ ಹೇಳಿದೆ. ಹಾಗಾಗಿ ದಾರಿ ಕಾಣದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಪೇಪರ್‌ ಟೌನ್‌ ಪೊಲೀಸ್‌ ಠಾಣೆ (Paper Town Police Station)

ಪೇಪರ್‌ ಟೌನ್‌ ಪೊಲೀಸ್‌ ಠಾಣೆಯ ಲಿಮಿಟ್‌ನಲ್ಲಿ ಆನ್​​ಲೈನ್ ಆ್ಯಪ್​​ ನಂಬಿ ಹಣ ಕಳೆದುಕೊಂಡ ಪ್ರದೀಪ್ (27) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಣ ಡಬ್ಬಲ್‌ ಆಗುತ್ತೆ ಎಂದು ನಂಬಿ ಆ್ಯಪ್​​ ವೊಂದರ ಮೇಲೆ ದುಡ್ಡು ಹಾಕಿದ್ದ. ಇದಕ್ಕಾಗಿ  91 ಸಾವಿರ ರೂಪಾಯಿ ಸಾಲ ಮಾಡಿದ್ದನಂತೆ. ಆದರೆ ಆ್ಯಪ್​​  ಇನ್ನಷ್ಟು ದುಡ್ಡು ಹಾಕಿ ಮತ್ತಷ್ಟು ದುಡ್ಡು ಹಾಕಿ ಹಳೆಯ ಅಮೌಂಟ್‌ ಬಿಡಿಸಿಕೊಳ್ಳಲು ಈ ಅಮೌಂಟ್‌ ಕಟ್ಟಿ, ನಿಮ್ಮ ಲಾಭ ಅಷ್ಟು ಬಿಡಿಸಿಕೊಳ್ಳಲು ಫೀಜ್‌ ಕಟ್ಟಿ ಎಂದು ಹೇಳಿದೆ. ಇದರಿಂದ ಬೇಸತ್ತ ಯುವಕ ತಾನು ಮೋಸಹೋಗಿರುವುದು ಗೊತ್ತಾಗಿದೆ. ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  

  ಇನ್ನಷ್ಟು ಸುದ್ದಿಗಳು