ಹಿಂದಿನಿಂದ ಬಂದ ಹೋರಿ ನೋಡಿ ಶಾಕ್‌ | ಚರಂಡಿಗೆ ಬಿದ್ದ ಯುವಕ ಸಾವು

youth died after falling into a ditch ,Yalavalli in Soraba taluk , Shivamogga district

ಹಿಂದಿನಿಂದ ಬಂದ ಹೋರಿ ನೋಡಿ ಶಾಕ್‌ | ಚರಂಡಿಗೆ ಬಿದ್ದ ಯುವಕ ಸಾವು
youth died after falling into a ditch ,Yalavalli in Soraba taluk , Shivamogga district

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 27, 2024 ‌ 

ತನ್ನ ಹಿಂದೆ ಬರುತ್ತಿದ್ದ ಹೋರಿಯನ್ನ ನೋಡಿ ಹದರಿದ ಯುವಕನೊಬ್ಬ ಅಲ್ಲಿಯೇ ಇದ್ದ ಮೋರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಯಲವಳ್ಳಿಯಲ್ಲಿ ವರದಿಯಾಗಿದೆ. 

ಕಳೆದ ಸೋಮವಾರ ಈ ಘಟನೆ ನಡೆದಿದೆ. ಇಲ್ಲಿನ ಯುವಕ ಶೋಕ್‌ ಎಂಬಾತ ಹೊರಿಹಬ್ಬ ನೋಡಲು ತೆರಳಿದ್ದ. ಬಳಿಕ ವಾಪಸ್‌ ಬರುವಾಗ ಈತನ ಹಿಂದೆ ಹೋರಿಯೊಂದು ಓಡಿ ಬರುತ್ತಿರುವದನ್ನ ಗಮನಿಸಿದ್ದಾನೆ. ಇದರಿಂದ ಹೆದರಿದ ಈತ ಪಕ್ಕದಲ್ಲಿರುವ ಚರಂಡಿಗೆ ಬಿದ್ದಿದ್ದಾನೆ. ಪರಿಣಾಮ ತಲೆಗೆ ಹಾಗೂ ಪಕ್ಕೆಗೆ ತೀವ್ರ ಪೆಟ್ಟಾಗಿದ್ದ ಈತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಸೋಮವಾರ ರಾತ್ರಿ ಸಾವನ್ನಪ್ಪಿದ್ದಾನೆ. ಈ ಕುರಿತು ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SUMMARY |youth died after falling into a ditch at Yalavalli in Soraba taluk of Shivamogga district.


KEY WORDS  | youth died after falling into a ditch ,Yalavalli in Soraba taluk , Shivamogga district