ದರ್ಶನ್‌ ಕೇಸ್‌ಗೂ 4 ತಿಂಗಳ ಹಿಂದೆ ನಡೆದಿದ್ದ ಗಾಡಿಕೊಪ್ಪ ಯುವಕನ ಶೆಡ್‌ ಕೇಸ್‌ ಸತ್ಯ ಬಯಲು! ಚಾರ್ಜ್‌ಶೀಟ್‌

ಕಾರಿನಲ್ಲಿಯೇ ಸುಟ್ಟು ಹಾಕಲಾಯ್ತಾ? ತೋಗರ್ಸಿಯಲ್ಲಿ ನಡೆದಿದ್ದೇನು?

ದರ್ಶನ್‌ ಕೇಸ್‌ಗೂ 4 ತಿಂಗಳ ಹಿಂದೆ ನಡೆದಿದ್ದ ಗಾಡಿಕೊಪ್ಪ ಯುವಕನ ಶೆಡ್‌ ಕೇಸ್‌ ಸತ್ಯ ಬಯಲು! ಚಾರ್ಜ್‌ಶೀಟ್‌
ಶಿವಮೊಗ್ಗ ಕ್ರೈಂ ವರದಿ

SHIVAMOGGA | MALENADUTODAY NEWS | Jul 13, 2024   

ನಟ ದರ್ಶನ್‌ ವಿಚಾರದಿಂದ ಶೆಡ್‌ ಎನ್ನುವ ಪದ ಸಾಕಷ್ಟು ಸುದ್ದಿಯಾಗುತ್ತಿದೆ. ಅಲ್ಲದೆ ಹಲವು ರೀತಿಯಲ್ಲಿ ಟ್ರೋಲ್‌ ಆಗುತ್ತಿದೆ. ಇದರ ನಡುವೆ ಶಿವಮೊಗ್ಗದ ಯುವಕನೊಬ್ಬನ ಪ್ರಕರಣದಲ್ಲಿ ಶೆಡ್‌ ಎಂಬ ಸಂಗತಿ ಈಗ್ಗೆ ಹಲವು ತಿಂಗಳ ಹಿಂದೆಯೇ ಬಂದಿತ್ತು. ಅಂದು ಮಾರ್ಚ್‌ 16 , ಶಿವಮೊಗ್ಗ ಸಿಟಿಯ ಕಿವಿಗೆ ಆಘಾತ ಕಾರಿ ಸುದ್ದಿ ಬಿದ್ದಿತ್ತು. ಗಾಡಿಕೊಪ್ಪದ ಯುವಕನನ್ನ ಆತನ ಕಾರಿನ ಸಮೇತ ಸುಟ್ಟು ಹಾಕಲಾಗಿದೆ ಎಂಬುದು ಆ ಸುದ್ದಿಯಾಗಿತ್ತು. ಆ ಬಗ್ಗೆ ಮಲೆನಾಡು ಟುಡೆ ಮೊದಲು ವರದಿ ಮಾಡಿತ್ತು. ಅದರ ಲಿಂಕ್‌ ಇಲ್ಲಿದೆ. 

ಲವ್ ಮ್ಯಾಟರ್​ಗೆ ಯುವಕನನ್ನ ಕೊಂದು ಕಾರಿನಲ್ಲಿಯೇ ಸುಟ್ಟು ಹಾಕಲಾಯ್ತಾ? ತೋಗರ್ಸಿಯಲ್ಲಿ ನಡೆದಿದ್ದೇನು?

ಪ್ರೀತ್ಸೋದು ತಪ್ಪಾ? ತಾಯಿಗೆ ಹೇಳಿದ್ದ ತಪ್ಪಾಯ್ತಾ? ಮಾರಿಕಾಂಬೆ ದರ್ಶನ ಪಡೆದು ಹೊರಟ ಗಾಡಿಕೊಪ್ಪ ಯುವಕನನ್ನ ಸುಟ್ಟುಹಾಕಿದ್ದೇಕೆ? ನಡೆದಿದ್ದೇನು?

ಮಾರಿಕಾಂಬೆಯ ಜಾತ್ರೆಗೆ ಬಂದು ಅಮ್ಮನ ದರ್ಶನ ಮಾಡಿಕೊಂಡು ಪ್ರೀತಿಸಿದ ಹುಡುಗಿಯನ್ನ ಕರೆದುಕೊಂಡು ಬರೋದಕ್ಕೆ ಅಂಥಾ ಹೋಗಿದ್ದ ವೀರೇಶ್‌ ಎಂಬಾತ ಅಂದು ಶಿವಮೊಗ್ಗಕ್ಕೆ ವಾಪಸ್‌ ಬಂದಿದ್ದು ಸುಟ್ಟ ಹೆಣವಾಗಿದೆ. ಅಂದು ಶಿರಾಳಕೊಪ್ಪ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ನಡೆದಿದ್ದ ಕ್ರೈಂ ಸಂಬಂಧ ಇದೀಗ ಚಾರ್ಜ್‌ ಶೀಟ್‌ ಪೈಲ್‌ ಆಗಿದೆ. ಅಚ್ಚರಿ ಸಂಗತಿ ಅಂದರೆ ವೀರೇಶ್‌ನ ಕೊಲೆಯ ರಹಸ್ಯವನ್ನು ಬಿಚ್ಚಿಟ್ಟಿರುವ ಚಾರ್ಜ್‌ಶೀಟ್‌, ಆತನನ್ನ ಆರೋಪಿಗಳು ಶೆಡ್‌ಗೆ ಕರೆದುಕೊಂಡು ಹಿಗ್ಗಾಮುಗ್ಗಾ ಥಳಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಸಾಯಿಸಿದ್ದರು. ಆ ಬಳಿಕ ಸಾಕ್ಷ್ಯ ನಾಶಕ್ಕಾಗಿ ಆತನನ್ನ  ಕಾರಿನಲ್ಲಿಟ್ಟು ಸುಟ್ಟುಹಾಕಿದ್ದರು ಎಂಬ ವಿಚಾರವನ್ನ ಚಾರ್ಚ್‌ ಶೀಟ್‌ ನಲ್ಲಿ ತಿಳಿಸಲಾಗಿದೆ. 

ಶಿರಾಳಕೊಪ್ಪದ ತೋಗರ್ಸಿ ಸಮೀಪ ವೀರೇಶ್‌ನ ಶವ ಪತ್ತೆಯಾಗಿತ್ತು. ಆದರೆ ಕೃತ್ಯ ನಡೆದ ಸ್ಥಳ ಆಧರಿಸಿ ಪ್ರಕರಣ ಹಾನಗಲ್‌ ಪೊಲೀಸ್‌ ಸ್ಟೇಷನ್‌ ಲಿಮಿಟ್‌ಗೆ ಹೋಗಿತ್ತು. ಅಲ್ಲಿ ತನಿಖೆ ನಡೆಸಿದ ಪೊಲೀಸರು ಅಕ್ಕಿಆಲೂರಿನ ಯುವತಿಯ (ವೀರೇಶ್‌ನ ಲವರ್) ಇಬ್ಬರು ಸಹೋದರರು, ತಂದೆ– ಚಿಕ್ಕಪ್ಪ ಹಾಗೂ ಮೂವರು ಕಾರ್ಮಿಕರನ್ನು ಬಂಧಿಸಿದ್ದರು. ಇದೀಗ ಪ್ರಕರಣದ ಸಂಬಂಧ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. 

ದೋಷಾರೋಪಣ ಪಟ್ಟಿಯಲ್ಲಿ ಶಿವಮೊಗ್ಗದಿಂದ ವೀರೇಶ್‌ನನ್ನ ಯುವತಿಯನ್ನ ಒಪ್ಪಿಸುವುದಾಗಿ ಹೇಳಿ ಕರೆಸಿಕೊಳ್ಳಲಾಗಿತ್ತು. ಅಕ್ಕಿ ಆಲೂರಿಗೆ ಬಂದ ವೀರೇಶ್‌ನನ್ನ ತಮ್ಮ ಕಾರ್ಮಿಕರ ಜೊತೆಗೆ ಭೇಟಿಯಾದ ಯುವತಿಯ ಸಂಬಂಧಿಕರು ಆತನ ಕಾರಿನಲ್ಲಿಯೇ ಅಲ್ಲಿಯೇ ಒಂದು ಶೆಡ್‌ಗೆ ಕರೆದೊಯ್ದಿದ್ದಾರೆ. ಅಲ್ಲಿ ಯುವತಿ ಸಹೋದರರು ಹಾಗೂ ಯುವತಿ ತಂದೆ ಮತ್ತು ಚಿಕ್ಕಪ್ಪ ಕಾರ್ಮಿಕರು ವೀರೇಶನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಮಚ್ಚಿನಿಂದ ಹಲ್ಲೆ ಮಾಡಿದ್ದರಿಂದ ವಿರೇಶ್‌ ಅಲ್ಲಿಯೇ ಸಾವನ್ನಪ್ಪಿದ್ಧಾನೆ. ಆ ಬಳಿಕ ಆತನ ಶವವನ್ನ ಆತನದ್ದೆ ಕಾರಿನಲ್ಲಿ ಹಾಕಿಕೊಂಡು ಐದು ಲೀಟರ್‌ ಪೆಟ್ರೋಲ್‌ ತೆಗೆದುಕೊಂಡು ತೋಗರ್ಸಿ ಬಳಿಗೆ ಬಂದಿದ್ದಾರೆ. ಅಲ್ಲಿ ಕಾರಿನ ಸಮೇತ ಶವವನ್ನ ಸುಟ್ಟು ಹಾಕಿದ್ದರು ಎಂದು ಚಾರ್ಜ್‌ ಶೀಟ್‌ನಲ್ಲಿ ಆರೋಪಿಸಲಾಗಿದೆ.