ಚಿಕಿತ್ಸೆ ಕೊಡಿಸಲು ತಾಯಿಯನ್ನ ಶರಾವತಿ ಹೊಳೆಯಲ್ಲಿ ಹೊತ್ತುಕೊಂಡ ಹೋದ ಮಗ
young man from the village had to carry his mother across the flooded river to get her to a hospital
Jul 27, 2024 SHIVAMOGGA | MALENADUTODAY NEWS |
ಮಲೆನಾಡಿನಲ್ಲಿ ಜನ ಎಷ್ಟೆಲ್ಲಾ ಸಾಹಸ ಮಾಡಬೇಕು ಎನ್ನುವುದಕ್ಕೆ ಸಾಕ್ಷಿಯಾಗುವಂತಹ ಘಟನೆಯೊಂದರ ಬಗ್ಗೆ ರಾಜ್ಯ ಪತ್ರಿಕೆಯೊಂದು ವರದಿ ಮಾಡಿದೆ. ಅದರ ವರದಿ ಪ್ರಕಾರ, ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನ ಗ್ರಾಮವೊಂದರ ಯುವಕ ತನ್ನ ತಾಯಿಯನ್ನು ಚಿಕಿತ್ಸೆಗಾಗಿ ತುಂಬಿದ ಶರಾವತಿಯ ಹಿನ್ನೀರಿನಲ್ಲಿ ಆಕೆಯನ್ನು ಹೊತ್ತುಕೊಂಡು ಸಾಗಿದ್ದಾನೆ. ಈ ಘಟನೆಯು ಕುತೂಹಲ ಮೂಡಿಸಿದೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಶರಾವತಿ ಹೊಳೆಯಲ್ಲಿ
ಶರಾವತಿ ಹಿನ್ನೀರು ದೂರದಿಂದ ಬಂದವರಿಗೆ ನೋಡೋಕೆ ಚೆನ್ನ. ಎಷ್ಟು ಚೆಂದ ಅಲ್ಲಾ ಅಂತಾ ಹೇಳಲು ಅಡ್ಡಿಯಿರಲ್ಲ. ಆದರೆ ಮಳೆ ಬಂದು ನೀರು ನುಗ್ಗುತ್ತಿದ್ದರೇ ಒಂದೊಂದೆ ಊರನ್ನ ಶರಾವತಿ ಮುಳುಗಿಸುತ್ತಾ ಬರುತ್ತೆ. ಅದೇ ರೀತಿಯಲ್ಲ ಬಾನುಕುಳಿ ಗ್ರಾಮ ಪಂಚಾಯಿತಿ ಕೊಂಚವಳ್ಳಿ ಎನ್ನುವ ಸಣ್ಣ ಹಳ್ಳಿ ಕೂಡ ಮಳೆಗಾಲದಲ್ಲಿ ದ್ವೀಪವಾಗುತ್ತದೆ. ಏನೇ ಬೇಕಾದರೂ ಹೊಳೆ ದಾಟಿಕೊಂಡೆ ಹೋಗಬೇಕಾಗುತ್ತದೆ. ಈ ನಡುವೆ ಇಲ್ಲಿನ ನಿವಾಸಿಯೊಬ್ಬರ ತಾಯಿಗೆ ಕಿಡ್ನಿ ಸಮಸ್ಯೆಯಿಂದ ನೋವು ಕಾಣಿಸಿದೆ ಈ ಕಾರಣಕ್ಕೆ ಅವರಿಗೆ ತುರ್ತು ಚಿಕಿತ್ಸೆ ಕೊಡಿಸಲು ಮಣಿಪಾಲ್‌ಗೆ ಕರೆದೊಯ್ಯಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಬೇರೆ ಉಪಾಯವಿಲ್ಲದ ಅವರ ಮಗ,ತಾಯಿಯನ್ನ ಎತ್ತಿಕೊಂಡು ಹೊಳೆಯನ್ನ ದಾಟಿಕೊಂಡು ಇನ್ನೊಂದು ದಡಕ್ಕೆ ಬಂದಿದ್ದಾನೆ. ಅಲ್ಲಿಂದ ಮುಂದಕ್ಕೆ ವಾಹನ ಮಾಡಿಕೊಂಡು ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದಾರೆ.
young man from the village had to carry his mother across the flooded river to get her to a hospital in Manipal for urgent treatment