SHIVAMOGGA | MALENADUTODAY NEWS
Sep 6, 2024
Yogaraj bhat | ಲೈಟ್ ಬಾಯ್ ಒಬ್ಬರು ಸಾವನ್ನಪ್ಪಿದ ಪ್ರಕರಣ ಸಂಬಂಧ ಕನ್ನಡ ಚಿತ್ರರಂದ ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮನದ ಕಡಲು ಸಿನಿಮಾ ಶೂಟಿಂಗ್ ವೇಳೆ ಸಂಭವಿಸಿದ ಘಟನೆಯ ಸಂಬಂಧ ಈ ಕೇಸ್ ದಾಖಲಾಗಿದೆ.
Kannada Film news – ಕನ್ನಡ ಚಿತ್ರರಂಗಕ್ಕೆ ಆಘಾತ
ಕಳೆದ ಸೆಪ್ಟೆಂಬರ್ 3 ರಂದು ಮನದ ಕಡಲು ಸಿನಿಮಾದ ಶೂಟಿಂಗ್ ವೇಳೆ ಲೈಟ್ ಬಾಯ್ ಮೋಹನ್ ಎಂಬವರು 30 ಅಡಿ ಉದ್ದದ ಏಣಿಯಿಂದ ಕೆಳಕ್ಕೆ ಬಿದ್ದಿದ್ದರು. ಈ ವೇಳೆ ಗಂಭೀರವಾದ ಗಾಯಗೊಂಡ ಅವರನ್ನ ಗೊರಗುಂಟೆ ಪಾಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಅವರು ನಿನ್ನೆ ಗುರುವಾರ ಸಾವನ್ನಪ್ಪಿದ್ದಾರೆ.
ಪ್ರಕರಣದಲ್ಲಿ ಚಿತ್ರದ ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಮತ್ತು ನಿರ್ವಾಹಕ ಸುರೇಶ್ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಚಿತ್ರೀಕರಣದ ವೇಳೆ ಸುರಕ್ಷತಾ ವೈಫಲ್ಯದ ಆರೋಪದ ಅಡಿಯಲ್ಲಿ ಕೇಸ್ ದಾಖಲಾಗಿದೆ.

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ