SHIVAMOGGA | MALENADUTODAY NEWS | ಮಲೆನಾಡು ಟುಡೆ Jan 27, 2025
ಶಿವಮೊಗ್ಗ ನೆಹರು ರೋಡ್‌ನಲ್ಲಿ ನಡೆದ ಎಟಿಎಂ ಕ್ಯಾಶ್ ಕಳ್ಳತನ ಯತ್ನದ ಪ್ರಕರಣದ ನಡುವೆ ಶಿವಮೊಗ್ಗ ಪೊಲೀಸ್ ಇಲಾಖೆ ಮತ್ತೊಂದು ಪ್ರಕಟಣೆಯನ್ನು ನೀಡಿದೆ. ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾ ಆಪ್ ಎಕ್ಸ್‌ನಲ್ಲಿ ಭದ್ರಾವತಿಯ ವಿಡಿಯೋವೊಂದು ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಗೋಹತ್ಯೆ ಮಾಡಲಾಗುತ್ತಿದೆ. ಅನಧಿಕೃತ ಕಸಾಯಿ ಖಾನೆಯಲ್ಲಿ ಗೋವುಗಳನ್ನ ಹತ್ಯೆ ಮಾಡಲಾಗುತ್ತಿದೆ. ಈ ಸಂಬಂಧ ಇಮೇಲ್ ಮೂಲಕ ದೂರು ನೀಡಲಾಗಿದೆ. ಆದರೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಪೊಲೀಸ್ ಇಲಾಖೆಯ ಅಧಿಕಾರಿಗಳ ಅಧಿಕೃತ ಎಕ್ಸ್ ಅಕೌಂಟ್‌ಗಳನ್ನ ಟ್ಯಾಗ್ ಮಾಡಿ ಪೋಸ್ಟ್ ಹಾಕಿದ್ದರು. ಆ ಪೋಸ್ಟ್ ಸಾಕಷ್ಟು ವೈರಲ್ ಆಗಿತ್ತು.
ಸದ್ಯ ಇದೇ ವಿಚಾರದ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಪ್ರಕಟಣೆಯನ್ನು ನೀಡಿದೆ. ಪ್ರಕಟಣೆಯಲ್ಲಿ ಮೇಲ್ಕಂಡ ರೀತಿಯಲ್ಲಿ ಹರಿದಾಡುತ್ತಿರುವ ವಿಡಿಯೋ ಮಾಹಿತಿ ಸುಳ್ಳು ಎಂದು ತಿಳಿಸಿದೆ. ಪೊಲೀಸ್ ಇಲಾಖೆಯ ಪ್ರಕಟಣೆಯ ವಿವರ ಹೀಗಿದೆ. ದಿನಾಂಕ: 26-01-2025 ರಂದು ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಗೋಹತ್ಯೆ ಮಾಡಿ ಗೋಮಾಂಸವನ್ನು ಮಾರುತ್ತಿದ್ದಾರೆಂದು ನೀಡಿದ ದೂರಿನ ಮೇರೆಗೆ ಹಳೇನಗರ ಪೊಲೀಸ್ ಠಾಣೆಯಲ್ಲಿ The Karnataka Prevention of Slaughter and Preservation of CATTLE Act- 2020 ರೀತ್ಯಾ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ದೂರು ಬಂದ ತಕ್ಷಣವೇ ಸದರಿ ಘಟನೆಗೆ ಸಂಭಂದಿಸಿದಂತೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರ ಸಹ ಹಳೆನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಸಹಾ ಪ್ರಕರಣ ದಾಖಲಿಸಿರುವುದಿಲ್ಲ ಎಂಬ ಸುಳ್ಳು ಮಾಹಿತಿಯುಳ್ಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿರುತ್ತದೆ. ಸಾರ್ವಜನಿಕರು ಈ ರೀತಿಯ ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬಾರದು ಹಾಗೂ ಸತ್ಯಾಸತ್ಯತೆಗಳ ಬಗ್ಗೆ ತಿಳಿಯದೆ, ಸುಳ್ಳು ಮಾಹಿತಿಗಳನ್ನು ಫಾರ್ವರ್ಡ್ ಮಾಡಬೇಡಿ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ಧಿ ಹರಿಬಿಡುವುದು ಕಾನೂನು ರೀತ್ಯಾ ಅಪರಾಧವಾಗಿದ್ದು, ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಈ ನಡುವೆ ಪೊಲೀಸ್ ಇಲಾಖೆಯ ಪ್ರಕಟಣೆಯ ನಡುವೆ ಎಕ್ಸ್ ಖಾತೆಯಲ್ಲಿನ ವಿಡಿಯೋ ಡಿಲೀಟ್ ಆಗಿದೆ

SUMMARY | Shimoga Police Department has said in its release that the Bhadravati video information circulating on the X social media account is false.
KEY WORDS |Shimoga Police Department, Bhadravati video information circulating on the X social media account is false, X social media