ಆಗುಂಬೆ ಘಾಟಿಯಲ್ಲಿ ಟು ಲೈನ್‌ ರಸ್ತೆ | ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮಹತ್ವದ ಹೇಳಿಕೆ

|work of two-laning of NH 169A on Agumbe Ghat , Udupi-Chikmagalur MP Kota Srinivas Poojary

ಆಗುಂಬೆ ಘಾಟಿಯಲ್ಲಿ ಟು ಲೈನ್‌ ರಸ್ತೆ | ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮಹತ್ವದ ಹೇಳಿಕೆ
v

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 14, 2024 ‌‌

ಲೋಕಸಭಾ ಸಂಸತ್‌ ಅಧಿವೇಶನದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಶಿವಮೊಗ್ಗ ಟು ಮಂಗಳೂರು ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣದ ಬಗ್ಗೆ ಮಾತನಾಡುತ್ತಾ. ಆಗುಂಬೆ ಘಾಟಿಯಲ್ಲಿ ಟು ಲೈನ್‌ ರಸ್ತೆ ಮಾಡುವುದು 2024-25 ರ ವಾರ್ಷಿಕ ಪ್ಲಾನ್‌ನಲ್ಲಿ ಸೇರಿಸಲಾಗಿದೆ ಎಂದಿದ್ದಾರೆ. 

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿರವರು ಕೇಳಿದ ಪ್ರಶ್ನೆ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ನಿತಿನ್‌ ಗಡ್ಕರಿ ಶಿವಮೊಗ್ಗ-ಮಂಗಳೂರು ಮಾರ್ಗದ ಎನ್‌ಎಚ್-169 ರ  ಮಾಲಾ ಗೇಟ್‌ನಿಂದ ಕಾರ್ಕಳ ಮಾರ್ಗದ 4 ಲೇನಿಂಗ್ ಕಾಮಗಾರಿ ಮುಂದಿನ ವರ್ಷ ಫೆಬ್ರವರಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದಿದ್ದಾರೆ. 

ಇದೇ ವೇಳೆ ಆಗುಂಬೆ ಘಾಟಿಯಲ್ಲಿ ಎನ್‌ಎಚ್ 169ಎ ದ್ವಿಪಥದ ಕಾಮಗಾರಿಯನ್ನು 2024-25ರ ವಾರ್ಷಿಕ ಯೋಜನೆಯಲ್ಲಿ ಸೇರಿಸಲಾಗಿದೆ  ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದ್ದಾರೆ.

 

SUMMARY | work of two-laning of NH 169A on Agumbe Ghat has been included in Annual Plan 2024-25, the minister said in his written answer to a question by Udupi-Chikmagalur MP Kota Srinivas Poojary.



KEY WORDS |work of two-laning of NH 169A on Agumbe Ghat , Udupi-Chikmagalur MP Kota Srinivas Poojary.