ಈ ಫೋಟೋದಲ್ಲಿರುವ ಮಹಿಳೆಯ ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ಕೊಡಿ
notice has been issued in connection with the missing woman's case from Jayanagar police station
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 11, 2024
ಶಿವಮೊಗ್ಗ | ಇಲ್ಲಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟೇಶನಗರ 5ನೇ ಕ್ರಾಸ್ ವಾಸಿ ಕೋಟೆಪ್ಪ ಎಂಬುವವರ ಪತ್ನಿ 41 ವರ್ಷದ ಪಾರ್ವತಮ್ಮ ಎಂಬ ಮಹಿಳೆ ಕಳೆದ ನವೆಂಬರ್ 09 ರಂದು ರಾತ್ರಿ ತನ್ನ ಮನೆಯಿಂದ ಹೊರಗೆ ಹೋಗಿದ್ದು ವಾಪಸ್ ಬಂದಿಲ್ಲ.
ಅವರ ಸುಳಿವಿಗಾಗಿ ಪೊಲೀಸ್ ಠಾಣೆಯಿಂದ ಪ್ರಕಟಣೆ ನೀಡಲಾಗಿದೆ. ಮಹಿಳೆಯ ಚಹರೆ 4.5 ಅಡಿ ಎತ್ತರ, ದುಂಡುಮುಖ, ಕಪ್ಪು ಮೈಬಣ್ಣ ಹೊಂದಿದ್ದಾರೆ. ಅವರು ಆರೆಂಜ್ ಕಲರ್ ಸೀರೆ ಮತ್ತು ಹಸಿರು ಬಣ್ಣದ ರವಿಕೆ ಧರಿಸಿರುತ್ತಾರೆ
ಈ ಮಹಿಳೆಯ ಕುರಿತು ಸುಳಿವು ದೊರಕಿದಲ್ಲಿ ಜಯನಗರ ಪೊಲೀಸ್ ಠಾಣೆ 08182-261416, ಜಿಲ್ಲಾ ಕಂಟ್ರೋಲ್ ರೂಂ.: 08182-261413 ಹಾಗೂ ಎಸ್.ಪಿ. ಕಚೇರಿ 08182-261400 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
SUMMARY | notice has been issued in connection with the missing woman's case from Jayanagar police station
KEYWORDS |woman missing , Jayanagar police station