ದಾವಣಗೆರೆ | ಕತ್ತಿನ ಸರಕ್ಕೆ ಕೈ ಹಾಕಿದ ಕಳ್ಳನನ್ನೆ ಕೆಡವಿ ಬೀಳಿಸಿ ಹಿಡಿದು ಕೂಲಿ ಕಾರ್ಮಿಕ ಮಹಿಳೆಯರು
woman laborer caught chain snatcher ,in Davangere, Channagiri Taluk, Tamkur, Shira Taluk, Madanayakana Halli, Hosadurga, Chitradurga

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 6, 2025
ಡ್ರಾಪ್ ಕೊಡುವ ನೆಪದಲ್ಲಿ ಕೂಲಿ ಕಾರ್ಮಿಕರೊಬ್ಬರ ಕತ್ತಿನ ಸರ ಕದಿಯಲು ಯತ್ನಿಸಿದ ಕಳ್ಳನೊಬ್ಬನನ್ನು ಮೂವರು ಮಹಿಳೆಯರು ಸೇರಿದ ಹಿಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಅಲ್ಲದೆ ಈ ಮಹಿಳೆಯರ ದೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ, ಕಳ್ಳ ಇವರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕಲ್ಲಿನಲ್ಲಿ ಹಲ್ಲೆ ಮಾಡಿದರೂ ಬಿಡದ ಮಹಿಳೆಯರು ಆತನನ್ನು ಥಳಿಸಿ ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ದಾವಣಗೆರೆ ಘಟನೆ
ಜಿಲ್ಲೆ ಚನ್ನಗಿರಿ ತಾಲ್ಲೂಕು ಕಾಕನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಕಾಲಿ ಕಾರ್ಮಿಕ ಮಹಿಳೆಯರು , ಕೂಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದರು. ರತ್ನಮ್ಮ , ಗೌರಮ್ಮ ಹಾಗೂ ಶಾಂತಮ್ಮ ತಮ್ಮ ಮನೆಗೆ ಹೋಗುತ್ತಿದ್ದಾಗ, ಅಲ್ಲಿಗೆ ಬೈಕ್‌ನಲ್ಲಿ ಬಂದ ಇಬ್ಬರು ಬನ್ನಿ ಡ್ರಾಪ್ ಕೊಡುವುದಾಗಿ ಹೇಳಿದ್ದಾರೆ. ಈ ವೇಳೆ ರತ್ನಮ್ಮ ಎಂಬವರು ಅವರ ಬೈಕ್ ಹತ್ತಿ ಮುಂದಕ್ಕೆ ಸಾಗಿದ್ದಾರೆ. ಆದರೆ ಬೈಕ್‌ನಲ್ಲಿ ರತ್ನಮ್ಮರನ್ನ ಕರೆದುಕೊಂಡು ಹೊರಟ ಬೈಕ್ ಸವಾರರು ಚೂರು ಮುಂದಕ್ಕೆ ಹೋಗುತ್ತಲೇ ಅವರನ್ನ ಇಳಿಸಿದ್ದಾರೆ. ಅಲ್ಲದೆ ಬೈಕ್ ಓಡಿಸುತ್ತಿದ್ದಾತ ರತ್ನಮ್ಮರ ಕತ್ತಿನಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿ ಕಿತ್ತುಕೊಂಡಿದ್ದಾನೆ.
ಈ ವೇಳೆ ದೈರ್ಯಗೆಡೆದ ರತ್ನಮ್ಮ ಬೈಕ್‌ನ ಹಿಂಬದಿ ಕುಳಿತಿದ್ದ ಸವಾರನ ಷರ್ಟ್ ಹಿಡಿದು ಎಳೆದು ಕೆಳಕ್ಕೆ ಬೀಳಿಸಿದ್ದಾಳೆ. ಅಲ್ಲದೆ ಆತನ ಕೈ ಕಾಲು ಮೆಟ್ಟಿ ಆತನನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ್ದಾಳೆ. ಇದೇ ವೇಳೆ ಆತನ ಅಲ್ಲಿದ್ದ ಕಲ್ಲಿನಿಂದ ಆಕೆಯ ಮೇಲೆ ದಾಳಿ ಮಾಡಿದ್ದ. ಅಷ್ಟರಲ್ಲಿ ಇನ್ನೊಬ್ಬ ಹಿಂದೆ ಬರುತ್ತಿದ್ದ ಇನ್ನಿಬ್ಬರು ಮಹಿಳೆಯರು ಓಡಿ ಬಂದಿದ್ದು ರತ್ನಮ್ಮರ ಸಹಾಯಕ್ಕೆ ನಿಂತು ಒಬ್ಬ ಕಳ್ಳನನ್ನು ಹಿಡಿದು ಕಟ್ಟಿಹಾಕಿದ್ದಾರೆ.
ಆ ಬಳಿಕ ಸ್ಥಳಕ್ಕೆ ಪೊಲೀಸರು ಬಂಧಿದ್ದು, ಸಿಕ್ಕಿಬಿದ್ದ ಕಳ್ಳನನ್ನು ವಿಚಾರಿಸಿದ್ದಾರೆ. ಆತ ತಾನು ತುಮಕೂರು ಜಿಲ್ಲೆ ಶಿರಾ ತಾಲ್ಲೂಕು, ಮಾದನಾಯಕನಹಳ್ಳಿಯ ಸುರೇಶ್ ಎಂದಿದ್ದಾನೆ. ತಪ್ಪಿಸಿಕೊಂಡಾತ ಚಿತ್ರದುರ್ಗದ ಹೊಸದುರ್ಗ ತಾಲ್ಲೂಕುನವನು ಎಂದು ತಿಳಿಸಿದ್ದಾನೆ. ಸ್ಥಳಕ್ಕೆ ಭೇಟಿಕೊಟ್ಟ ಎಸ್‌ಪಿ ಉಮಾಪ್ರಶಾಂತ್ ಆರೋಪಿ ಪತ್ತೆಗೆ ಟೀಂ ರಚನೆ ಮಾಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
SUMMARY | A woman laborer caught a chain snatcher in Davangere, Channagiri Taluk, Tamkur, Shira Taluk, Madanayakana Halli, Hosadurga, Chitradurga
KEY WORDS | A woman laborer caught chain snatcher ,in Davangere, Channagiri Taluk, Tamkur, Shira Taluk, Madanayakana Halli, Hosadurga, Chitradurga