ವ್ಯಕ್ತಿಯೊಬ್ಬರ ತೋಟದ ಕೆರೆಯಲ್ಲಿ ಮಹಿಳೆಯ ಶವ ಪತ್ತೆ | ನಡೆದಿದ್ದೇನು?

A woman's body has been found in a lake in a village in Hosanagar taluk, Shimoga district.

ವ್ಯಕ್ತಿಯೊಬ್ಬರ ತೋಟದ ಕೆರೆಯಲ್ಲಿ ಮಹಿಳೆಯ ಶವ ಪತ್ತೆ | ನಡೆದಿದ್ದೇನು?
woman body found in a lake , Hosanagar taluk, Shimoga district

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 22, 2024 ‌‌  

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕುನ ಗ್ರಾಮವೊಂದರಲ್ಲಿನ ಕೆರೆಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿದೆ. ಇಲ್ಲಿನ ಗರ್ತಿಕೆರೆ ಗ್ರಾಮ ಪಂಚಾಯಿತಿಯ ಅವುಕ ಗ್ರಾಮದಲ್ಲಿರುವ ವ್ಯಕ್ತಿಯೊಬ್ಬರ ತೋಟದಲ್ಲಿರುವ ಕೆರೆಯಲ್ಲಿ ಮಹಿಳೆ ಶವ ಇವತ್ತು ಪತ್ತೆಯಾಗಿದೆ. ಮೃತರನ್ನ ಕುಮ್ಮಚ್ಚಿ ನಿವಾಸಿ ರೇಖಾ 36 ವರ್ಷ ಎಂದು ಗೊತ್ತಾಗಿದೆ. ಇವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು ಎನ್ನಲಾಗಿದೆ. 

ರೇಖಾ ಎಂಬವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಪೊಲೀಸರಿಗೂ ಸಂಬಂಧಿಕರು ದೂರು ನೀಡಿದ್ದರು. ಪತಿಯನ್ನು ಕಳೇದುಕೊಂಡಿದ್ದ ಅವರು ಮದ್ಯವಸನಿಯಾಗಿದ್ದರು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಅವರಿಗಾಗಿ ಹುಡುಕಾಟ ನಡೆಸ್ತಿದ್ಧಾಗ ಇವತ್ತು ಅವರ ಮೃತದೇಹ ಇಲ್ಲಿನ ನಿವಾಸಿಯೊಬ್ಬರ ತೋಟದ ಕೆರೆಯಲ್ಲಿ ಪತ್ತೆಯಾಗಿದೆ.ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿರುವ ರಿಪ್ಪನ್‌ಪೇಟೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

SUMMARY |  A woman's body has been found in a lake in a village in Hosanagar taluk, Shimoga district.

KEY WORDS |  woman body found in a lake , Hosanagar taluk, Shimoga district