ಭದ್ರಾವತಿಯಲ್ಲಿ ಉಡುಪಿ ಮಲ್ಪೆ ಪೊಲೀಸರ ಕಾರ್ಯಾಚರಣೆ! ಮಹಿಳೆ ಅರೆಸ್ಟ್‌ !

woman arrested in bhadravati by udupi police

ಭದ್ರಾವತಿಯಲ್ಲಿ ಉಡುಪಿ ಮಲ್ಪೆ ಪೊಲೀಸರ ಕಾರ್ಯಾಚರಣೆ! ಮಹಿಳೆ ಅರೆಸ್ಟ್‌ !
woman arrested in bhadravati by udupi police

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 4, 2025 ‌‌ ‌

ಕಳ್ಳತನ ಪ್ರಕರಣದಲ್ಲಿ ವಿಚಾರಣೆಗೆ ಕೋರ್ಟ್‌ಗೆ ಹಾಜರಾಗದೇ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳಾ ಆರೋಪಿಯೊಬ್ಬರನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಪತ್ತೆ ಮಾಡಿ ಅರೆಸ್ಟ್‌ ಮಾಡಲಾಗಿದೆ. ಉಡುಪಿ ಮಲ್ಪೆ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. 

ಉಡುಪಿ ಜಿಲ್ಲೆ ಮಲ್ಪೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ  ಉಡುಪಿ ಎಸಿಜೆ ಮತ್ತು ಸಿಜೆಎಂ ನ್ಯಾಯಾಲಯಕ್ಕೆ ನೇತ್ರಾ ಎಂಬಾಕೆ ಹಾಜರಾಗಬೇಕಿತ್ತು. ಆದರೆ ಸುಮಾರು 10 ವರ್ಷಗಳಿಂದ ಹಾಜರಾಗದೆ ತಲೆಮರಿಸಿಕೊಂಡಿದ್ದ ಈಕೆಯ ಪತ್ತೆಗಾಗಿ ವಾರಂಟ್‌ ಹೊರಡಿಸಲಾಗಿತ್ತು. ಇದೀಗ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ಮಾ. 11ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.