ರೋಡ್ ಸೈಡ್‌ನಲ್ಲಿ ಕಾಡುಕೋಣದ ಬೇಟೆ | ಹೊಸನಗರ ಸಂಪೆಕಟ್ಟೆಯಲ್ಲಿ ಅರಣ್ಯ ಇಲಾಖೆಗೆ ಶಾಕ್
wild gour poached in Sampekatte, Hosanagar taluk, Mattikai forest area, Mookambika Wildlife Sanctuary border, Sagar subdivision.

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 11, 2025
ಮಲೆನಾಡಿನಲ್ಲಿ ಕಾಡುಕೋಣದ ಶಿಕಾರಿಯ ಮಲೆನಾಡು ಟುಡೆ ವರದಿ ಮಾಡುತ್ತಲೇ ಬಂದಿದೆ. ಇದೀಗ ಮತ್ತೊಂದು ಕಾಡುಕೋಣವನ್ನು ಮಾಂಸಕ್ಕಾಗಿ ಬೇಟೆಯಾಡಿರುವ ಅನುಮೂನ ಮೂಡಿದೆ. ಇದಕ್ಕೆ ಪೂರಕ ಸಾಕ್ಷಿಯೆನ್ನುವಂತೆ ಹೊಸನಗರ ತಾಲ್ಲೂಕು ಸಂಪೆಕಟ್ಟೆಯಲ್ಲಿ ಕಾಡುಕೋಣವನ್ನ ಬೇಟೆಯಾಡಿ ಅದರ ಚರ್ಮ ಸುಲಿದು ಹಾಕಿರುವ ಘಟನೆ ಬಗ್ಗೆ ವರದಿಯಾಗಿದೆ.
ಸಾಗರ ಉಪವಿಭಾಗದದಲ್ಲಿ ಬರುವ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಗಡಿ ಪ್ರದೇಶವಾದ ಮತ್ತಿಕೈ ಅರಣ್ಯ ಪ್ರದೇಶದ ರಸ್ತೆಯ ಬದಿಯಿಂದ ತುಸು ದೂರದಲ್ಲಿಯೇ ಕಾಡುಕೋಣವನ್ನು ಬೇಟೆಯಾಡಲಾಗಿದೆ. ನಾಲ್ಕೈದು ವರ್ಷ ಇರಬಹುದಾದ ಕಾಡುಕೋಣವನ್ನ ಬೇಟೆಯಾಡಲಾಗಿದ್ದು, ಅದರ ಮಾಂಸದ ಭಾಗವನ್ನ ತೆಗೆದುಕೊಂಡಿರುವ ಆರೋಪಿಗಳು ಅವಶೇಷಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಪಶುವೈದ್ಯರು ಸ್ಥಳಪರಿಶೀಲನೆ ನಡೆಸಿದ್ದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇನ್ನೂ ಅನುಮಾನದ ಮೇರೆಗೆ ಓರ್ವವನ್ನ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಇದೆ
SUMMARY |A wild gour has been poached in Sampekatte, Hosanagar taluk, Mattikai forest area, bordering the Mookambika Wildlife Sanctuary in Sagar subdivision.
KEY WORDS | wild gour poached in Sampekatte, Hosanagar taluk, Mattikai forest area, Mookambika Wildlife Sanctuary border, Sagar subdivision.