ಆಗುಂಬೆಯಲ್ಲಿಯೇ ಹೆಚ್ಚಾಯ್ತು ತಾಪಮಾನ | ಬಿಸಿಗಾಳಿಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ !

weather today heat wave

ಆಗುಂಬೆಯಲ್ಲಿಯೇ ಹೆಚ್ಚಾಯ್ತು ತಾಪಮಾನ | ಬಿಸಿಗಾಳಿಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ !
weather today heat wave

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 12, 2025 ‌‌ ‌

ಮಳೆ, ಚಳಿಯಂತೆ ಈ ಸಲ ಬೇಸಿಗೆಯು ಬಲು ಜೋರಾಗಿದೆ. ಈಗಾಗಲೇ ಸೆಕೆಗುಳ್ಳೇ ಮೈಮೇಲೆ ಕಾಣಿಸಿಕೊಳ್ಳುತ್ತಿದ್ದು, ಬಿಸಿಲು ಮೈ ಸುಡುತ್ತಿದೆ. ಇದರ ನಡುವೆ IMD ಪ್ರಕಾರ, ರಾಯಚೂರು, ಶಿವಮೊಗ್ಗ, ಹಾಸನ ಮತ್ತು ಮಂಡ್ಯ ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಬಹಳಷ್ಟು ಏರಿಕೆಯಾಗಿದೆ. 

ಬೆಳಗಾವಿ, ಬೀದರ್, ವಿಜಯಪುರ, ಧಾರವಾಡ, ಗದಗ, ಕೊಪ್ಪಳ, ಹಾವೇರಿ, ರಾಯಚೂರು, ಬಾಗಲಕೋಟೆ, ಬೆಂಗಳೂರು, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಚಿಂತಾಮಣಿ, ಮಂಡ್ಯ, ಮಡಿಕೇರಿ, ಶಿವಮೊಗ್ಗ, ಚಾಮರಾಜನಗರ, ಆಗುಂಬೆ ಮತ್ತು ದಾವಣಗೆರೆಯಲ್ಲಿ ತಾಪಮಾನ ಏರಿಕೆಯಾಗಿದ್ದು ಬಿಸಿಗಾಳಿ ಮೈ ಸುಡುತ್ತಿದೆ.

ಇನ್ನೊಂದೆಡೆ ಮುಂದಿನ ಎರಡು ದಿನಗಳಲ್ಲಿ ಇನ್ನಷ್ಟು ಬಿಸಿಲು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಮಟ ಮಧ್ಯಾಹ್ನದ ಅವಧಿಯ ಕೆಲಸಗಳನ್ನು ಕಡಿಮೆ ಮಾಡುವುದು ಒಳ್ಳೆಯದು ತಜ್ಞರು ಎಚ್ಚರಿಸುತ್ತಿದ್ದಾರೆ. ಇದರ ನಡುವೆ ಮಾರ್ಚ್‌ ಮೂರನೇ ವಾರದಲ್ಲಿ ದಕ್ಷಿಣ ಒಳನಾಡಿನ ಆಯ್ದ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮನ್ಸೂಚನೆಯನ್ನು ಸಹ ಹವಾಮಾನ ಇಲಾಖೆ ನೀಡಿದೆ