ವಯನಾಡು ದುರಂತ | ಕ್ರೀಡಾ ವೇತನವನ್ನು ದೇಣಿಗೆಯಾಗಿ ನೀಡಿದ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿನಿ
Wayanad tragedy | Shimoga district student donates sports salary |ವಯನಾಡು ದುರಂತ | ಕ್ರೀಡಾ ವೇತನವನ್ನು ದೇಣಿಗೆಯಾಗಿ ನೀಡಿದ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿನಿ
SHIVAMOGGA | MALENADUTODAY NEWS | Aug 4, 2024
ಕೇರಳದ ವಯನಾಡಿನಲ್ಲಿ ಸಂಭವಿಸಿದ ಮರುಗಿದ ಮನಗಳು ತಮ್ಮ ಕೈಲಾದ ದೇಣಿಗೆ ನೀಡಿ ನೆರವಿನ ಹಸ್ತ ಚಾಚುತ್ತಿವೆ. ಇದಕ್ಕೆ ಪೂರಕ ಎಂಬಂತೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ರಾಮಕೃಷ್ಣ ಶಿಕ್ಷಣ ಸಂಸ್ಥೆಯ 09 ನೇ ತರಗತಿಯ ವಿದ್ಯಾರ್ಥಿನಿ ಶ್ರೇಯಾ ತನಗೆ ದೊರೆತ ಕ್ರೀಡಾ ವೇತನವನ್ನು ದೇಣಿಗೆಯಾಗಿ ನೀಡಿ ವಿಶಿಷ್ಟತೆ ತೋರಿದ್ದಾಳೆ
ಕ್ರೀಡಾ ವೇತನ ದೇಣಿಗೆಗೆ ನೀಡಿದ ಕಬ್ಬಡಿ ಆಟಗಾರ್ತಿ
ಈಕೆ 14 ವರ್ಷ ವಯೋಮಿತಿಯೊಳಗಿನ ರಾಷ್ಟ್ರೀಯ ಕಬ್ಬಡಿಯಲ್ಲಿ ರಾಜ್ಯ ತಂಡದಿಂದ ರಾಷ್ಟ್ರ ಮಟ್ಟದ ಕಬ್ಬಡಿ ತಂಡಕ್ಕೆ ಆಯ್ಕೆಯಾಗಿ ಉತ್ತಮ ನಿರ್ಹವಣೆ ತೋರಿದ್ದಳು. ಅದಕ್ಕಾಗಿ ಕರ್ನಾಟಕ ಸರ್ಕಾರ ನೀಡಿದ ಹತ್ತು ಸಾವಿರ ರೂಪಾಯಿಗಳ ಕ್ರೀಡಾ ವೇತನ ನೀಡಿತ್ತು.
ಸೋದರಿಯ ಜೊತೆ ಕೈ ಜೋಡಿಸಿದ ಸಹೋದರ
ಈ ಹಣವನ್ನು ವಯನಾಡಿನಲ್ಲಿ ಸಂಭವಿಸಿದ ಘಟನೆಯ ನೆರವಿಗೆ ನೀಡುವುದಾಗಿ ನಿರ್ಧರಿಸಿದ್ದ ಶ್ರೇಯಾ ಈ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ. ಶ್ರೇಯಾಳ ಮಾತಿಗೆ ಮರುಗಿದ ಪೋಷಕರು, ಈ ಬಗ್ಗೆ ತಮ್ಮವರ ಜೊತೆಗೆ ಮಾಹಿತಿ ಹಂಚಿಕೊಂಡಿದ್ದರು. ವಿಷಯ ತಿಳಿದು ತಹಶೀಲ್ದಾರ್ ರಶ್ಮೀ ರಿಪ್ಪನ್‌ಪೇಟೆಯ ನಾಡ ಕಛೇರಿಗೆ ಬಂದು ಶ್ರೇಯಾ ಹಾಗೂ ಆಕೆಯ ಕುಟುಂಬಸ್ಥರು ನೀಡಿದ ಹಣವನ್ನು ಸ್ವೀಕರಿಸಿದ್ದಾರೆ. ಇದೇ ವೇಳೇ ಶ್ರೇಯಾಳ ಸಹೋದರ ಶ್ರವಂತ್ ಸಹ ತನ್ನ ಉಳಿತಾಯದಲ್ಲಿ ಐದು ಸಾವಿರ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ