ನಿಮ್ಮ ಮನೆಯಲ್ಲಿ ಒಂದು ಸಮಸ್ಯೆ ಇದೆ ಎಂದು ಹೇಳಿದವನು 54 ದಿನ ಬಳಿಕ ಕೊಟ್ಟ ಶಾಕ್ | ಹುಷಾರ್ ಇದಕ್ಕೆ ಅವಕಾಶ ಕೊಡಬೇಡಿ
Shivamogga vinobhanagara police station case | ಮಾಟ ಮಂತ್ರದ ಹೆಸರಿನಲ್ಲಿ ಒಡವೆ ಪೂಜೆ ಮಾಡಿ 13 ಲಕ್ಷ ರೂಪಾಯಿಗೆ ಹೆಚ್ಚು ಹಣ ವಂಚಿಸಿದ ಘಟನೆ ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ
SHIVAMOGGA | MALENADUTODAY NEWS | Sep 1, 2024 ಮಲೆನಾಡು ಟುಡೆ
ಟೆಕ್ನಾಲಿಜಿ ಹೈಟೆಕ್ ಆದರೂ ಜನರು ಮಾತ್ರ ಇನ್ನೂ ಕೆಲವು ಮೂಢ ನಂಬಿಕೆಯಿಂದ ಆಚೆ ಬಂದಿಲ್ಲ. ಇದೀಗ ಅಂತಹುದ್ದೆ ನಂಬಿಕೆಯಿಂದ ಸಂತ್ರಸ್ತರೊಬ್ಬರು 13,60,000 ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಕಳೆದುಕೊಂಡಿದ್ದಾರೆ. ಅದರ ವಿವರ ಹೀಗಿದೆ. ಸೋಮಿನಕೊಪ್ಪದ ಬೋವಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ಮಂಕುಬೂದಿ
ಇಲ್ಲಿನ ನಿವಾಸಿಯೊಬ್ಬರಿಗೆ ಶ್ರೀನಿವಾಸ ಎಂಬಾತ ಭದ್ರಾವತಿಯಲ್ಲಿ ಸಿಕ್ಕಿದ್ದನಂತೆ. ಈತ ವಾಮಚಾರದ ವಿದ್ಯೆ ಕಲಿತಿದ್ದು, ಅದನ್ನ ಸಂತ್ರಸ್ತ ಮಹಿಳೆಯ ಮುಂದೆ ಪ್ರದರ್ಶಿಸಿ ನಂಬಿಕೆ ಮೂಡಿಸಿದ್ದ ಎನ್ನಲಾಗಿದೆ. ಒಬ್ಬರ ಬೆನ್ನಿನಿಂದ ತಗಡು ತೆಗೆದಂತೆ ನಾಟಕವಾಡಿ ಮಾಟ ಮಾಡಿದ್ದಾರೆ ಎಂದು ತೋರಿಸಿದ್ದ ನಂಬಿದ್ದ ಮಹಿಳೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಆಕೆಯ ನಂಬಿಕೆಯನ್ನ ಭದ್ರ ಮಾಡಿಕೊಂಡಿದ್ದ ವ್ಯಕ್ತಿ ಮಾಟ ಮಂತ್ರ ಮತ್ತು ಮೋಸದ ಬಲೆ ಹೆಣೆದಿದ್ದ
ಮಾಟ ಮಂತ್ರದ ಹೆಸರಲ್ಲಿ ಮೋಸ
ಮಹಿಳೆಯ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಕೆಯ ಮನೆ ಬಂದಿದ್ದ ಶ್ರೀನಿವಾಸ ಎಂಬಾತ, ನಿಮ್ಮನೆಯಲ್ಲೊಂದು ಸಮಸ್ಯೆ ಇದೆ. ಇದಕ್ಕಾಗಿ ಒಡವೆ ವಸ್ತ್ರದ ಪೂಜೆ ಆಗಬೇಕು ಎಂದಿದ್ದಾನೆ. ಅದೇ ರೀತಿಯಲ್ಲಿ ಮನೆಯಲ್ಲಿದ್ದ ಎಲ್ಲಾ ಆಭರಣಗಳನ್ನ ಕೋಣೆಯೊಂದರಲ್ಲಿ ಇಟ್ಟು ಏಕಾಂಗಿಯಾಗಿ ಪೂಜೆ ಸಲ್ಲಿಸಿದ್ದಾನೆ. ಆನಂತರ ರೂಮಿನಿಂದ ಪೆಟ್ಟಿಗೆಯೊಂದನ್ನ ಹೊರತಂದು ಅದಕ್ಕೆ 54 ದಿನ ಪೂಜೆ ಮಾಡಿ ಎಂದಿದ್ದಾನೆ.
ವಿನೋಬನಗರ ಪೊಲೀಸ್ ಠಾಣೆ
ಮಂಕುಬೂದಿ ಅಂದರೆ ಇದೆ ಇರಬೇಕು ಆತ ಹೇಳಿದ ಹಾಗೆ ಪೂಜೆ ಮಾಡಿ ಮಹಿಳೆಯರಿಗೆ 54 ದಿನ ಕಳದ ಬಳಿಕ ಅನುಮಾನ ಮೂಡಿದೆ. ಆತನಿಗೆ ಕರೆ ಮಾಡಿ ಕೇಳಿದಾಗ ಇನ್ನೊಂದಿಷ್ಟು ದುಡ್ಡು ಹಾಕುವಂತೆ ಆತ ಹೇಳಿದ್ದ . ಹೀಗಾಗಿ ಆತನ ಮೇಲೆ ಅನುಮಾನಗೊಂಡ ಮಹಿಳೆಯರು ಪೆಟ್ಟಿಗೆ ಒಡೆದು ಆಭರಣಗಳನ್ನ ಹುಡುಕಿದ್ದಾರೆ. ಅದರಲ್ಲಿರುವುದು ನಕಲಿ ಚಿನ್ನ ಎಂದು ಗೊತ್ತಾಗಿದೆ. ಆ ಬಳಿಕ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ವಿನೋಬ ನಗರ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.
ಜೂನ್, ಜುಲೈ, ಆಗಸ್ಟ್ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್ ನ್ಯೂಸ್ ಇಲ್ಲಿದೆ
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?