ರೋಡ್ ದಾಟುತ್ತಿದ್ದಾಗ ಹಿಂದಿನಿಂದ ಎದುರಾಗಿತ್ತು ಆಘಾತ | ಬೈಕ್‌ಗೆ ಕಾರು ಡಿಕ್ಕಿ
two-wheeler was hit by a car from behind near Kauti on Soraba Road in Sagar taluk of Shivamogga district.
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 14, 2024
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ರಸ್ತೆಯ ಕೌತಿ ಬಳಿ ಪೇಟೆಯಿಂದ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಕಾರೊಂದು ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಕೌತಿ ಗ್ರಾಮದ ರಾಮಚಂದ್ರ (59) ಎಂದು ಗುರುತಿಸಲಾಗಿದೆ. ಇವರು ಮನೆಗೆ ಮರುಳುತ್ತಿದ್ದ ವೇಳೆ ಬೈಕ್‌ನ್ನು ರಸ್ತೆ ದಾಟಿಸಲು ಮುಂದಾಗಿದ್ದಾರೆ.
ಈ ವೇಳೇ ಗಾರ್ಮೆಂಟ್ ಫ್ಯಾಕ್ಟರಿಯ ನೌಕರರಿದ್ದ ಕಾರು ವೇಗವಾಗಿ ಬಂದು ಬೈಕ್‌ಗೆ ಗುದ್ದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆ ಬೆನ್ನಲ್ಲೆ ಕಾರಿನ ಚಾಲಕ ಪರಾರಿಯಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SUMMARY | two-wheeler was hit by a car from behind near Kauti on Soraba Road in Sagar taluk of Shivamogga district.
KEYWORDS | two-wheeler was hit by a car , Kauti on Soraba Road,Sagar taluk of Shivamogga district.