ಭದ್ರಾ ಚಾನಲ್‌ನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು | ಒಬ್ಬನ ಉಳಿಸಲು ಹೋಗಿ ಇನ್ನೊಬ್ಬನು ಸಾವು
in Davangere two students died after going swimming in the Bhadra canal

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 3, 2025
ರಜೆಗೆ ಅಂತಾ ಬಂದಿದ್ದ ಇಬ್ಬರು ವಿದ್ಯಾರ್ಥಿಗಳು ಈಜಲು ಹೋಗಿ ಭದ್ರಾ ನಾಲೆಯಲ್ಲಿ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ಸಂಭವಿಸಿದೆ.
ದಾವಣಗೆರೆ ವರದಿ
ದಾವಣಗೆರೆಯ ಗುರುಕುಲ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ನಿನ್ನೆ ದಿನ ರಜೆ ಹಿನ್ನೆಲೆಯಲ್ಲಿ ಕಟಿಂಗ್ ಮಾಡಿಸುವ ಸಲುವಾಗಿ ಕುರ್ಕಿ ಗ್ರಾಮಕ್ಕೆ ಬಂದಿದ್ದರು. ಇಲ್ಲಿಗೆ ಬಂದವರು ಭದ್ರಾ ನಾಲೆಯಲ್ಲಿ ಈಜಲು ಮುಂದಾಗಿದ್ದಾರೆ. ಈ ವೇಳೆ ಪಾಂಡು ಎಂಬಾತನಿಗೆ ಈಜು ಬರುತ್ತಿತ್ತು. ಯತೀಂದ್ರ ಎಂಬಾತನಿಗೆ ಈಜಲು ಬರುತ್ತಿರಲಿಲ್ಲ. ಆದಾಗ್ಯು ನೀರಿಗೆ ಇಳಿದಿದ್ದ ಯತೀಂದ್ರ ನೀರಿನಲ್ಲಿ ಮೇಲೆ ಕೆಳಗೆ ಹೋಗಲು ಆರಂಭಿಸಿದ್ದ. ಇದನ್ನ ಗಮನಿಸಿದ ಪಾಂಡು ಆತನನ್ನು ರಕ್ಷಣೆ ಮಾಡಲು ಮುಂದಾಗಿದ್ದಾನೆ. ಆದರೆ ಅಷ್ಟರಲ್ಲಿ ನೀರಿನ ಒತ್ತಡಕ್ಕೆ ಸಿಲುಕಿದ ಇಬ್ಬರು ಸಹ ನೀರಿನಲ್ಲಿ ಮುಳುಗಿದ್ದಾರೆ. ಘಟನೆ ಬೆನ್ನಲ್ಲೆ ಸುತ್ತಮುತ್ತಲಿನ ಊರಿನಲ್ಲಿ ನೀರವ ಮೌನ ಆವರಿಸಿದ್ದು, ಜನರು ಮಕ್ಕಳ ಸಾವಿಗೆ ದುಃಖ ವ್ಯಕ್ತಪಡಿಸುತ್ತಿದ್ದಾರೆ.
SUMMARY | in Davangere two students died after going swimming in the Bhadra canal
KEY WORDS | in Davangere, two students died in the Bhadra canal