ಜೋತು ಬಿದ್ದ ವಿದ್ಯುತ್ ತಂತಿ ತಗುಲಿ ಲಾರಿಗೆ ಬೆಂಕಿ | ಚಾಲಕ ಸಾವು | ದುರಂತಕ್ಕೆ ಕಾರಣಯಾರು?
truck loaded with grass caught fire in Soraba taluk of Shivamogga district, killing its driver on the spot.
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 8, 2024
ಹುಲ್ಲು ತುಂಬಿದ ಲಾರಿಯೊಂದಕ್ಕೆ ಬೆಂಕಿ ಬಿದ್ದು, ಅದರ ಚಾಲಕನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ನಲ್ಲಿ ಸಂಭವಿಸಿದೆ.
ಸೊರಬ ತಾಲ್ಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ನಿನ್ನೆ ಶನಿವಾರ ಘಟನೆ ನಡೆದಿದೆ. ಶಿರಾಳಕೊಪ್ಪದ ಮಠದಗದ್ದೆ ನಿವಾಸಿ ಮೊಹಮ್ಮದ್ ಈಶಾಮ್ (32) ಮೃತ ಚಾಲಕ.
ಬಳ್ಳಿಗಾವಿಯಿಂದ ಸುತ್ತಕೋಟೆ ಮಾರ್ಗವಾಗಿ ಲಾರಿಯಲ್ಲಿ ಹುಲ್ಲು ತುಂಬಿಕೊಂಡು ಬರುತ್ತಿದ್ದ ವೇಳೆ, ಸ್ಥಳದಲ್ಲಿ ಜೋತು ಬಿದ್ದಿದ್ದ ವಿದ್ಯುತ್ ತಂತಿ ಹುಲ್ಲಿನ ಲಾರಿಗೆ ತಗುಲಿದೆ. ಪರಿಣಾಮ ವಿದ್ಯುತ್ ಪ್ರವಹಿಸಿ ಬೆಂಕಿ ಹೊತ್ತಿಕೊಂಡಿದೆ. ಇಡೀ ಲಾರಿ ಬೆಂಕಿಗೆ ಆಹುತಿಯಾಗಿ. ಚಾಲಕ ಸಾವನ್ನಪ್ಪಿದ್ದಾನೆ.
ಇನ್ನೂ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರ್ಘಟನೆ ಸಂಭವಿಸಿದೆ ಎಂದು ಈಶಾಮ್ ಅವರ ತಂದೆ ರಿಯಾಜ್ ಅಹ್ಮದ್, ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
SUMMARY | A truck loaded with grass caught fire in Soraba taluk of Shivamogga district, killing its driver on the spot.
KEY WORDS | truck loaded with grass caught fire,Soraba taluk of Shivamogga district,