ಕೊಲ್ಲೂರು ಹೆದ್ದಾರಿ ಪಕ್ಕ ಗುಂಡಿ ತೆಗೆದು ನಿಧಿ ಹುಡುಕಿದ ಆಗಂತುಕರು
treasure hunt conducted near the Kollur road, Hosanagara taluk.
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 13, 2024
ಹೊಸನಗರ ನಲ್ಲಿ ನಿಧಿಕಳ್ಳರ ಹಾವಳಿ ಶುರುವಾದಂತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೊಲ್ಲೂರು ಮಾರ್ಗದಲ್ಲಿ ಸಿಗುವ ಎಬಗೋಡು ಬಳಿ ನಿಧಿಶೋಧ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸ್ಥಳೀಯ ವರದಿ ಪ್ರಕಾರ, ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ನಿಧಿಯಾಸೆಯಾಗಿ ಗುಂಡಿ ತೋಡಿ ತಲಾಶ್ ನಡೆಸಲಾಗಿದೆ. ಹೆದ್ದಾರಿಯ ಮೇಲ್ಬಾಗದಲ್ಲಿರುವ ಶಿವಲಿಂಗವೊಂದರ ಪಕ್ಕದಲ್ಲಿ ಗುಂಡಿ ತೋಟಲಾಗಿದೆ. ಅಲ್ಲದೆ ಸ್ತಳದಲ್ಲಿ ಹಾರ, ಅರಶಿನ, ಕುಂಕುಮಮ, ನಿಂಬೆ ಹಣ್ಣು ಇತ್ಯಾದಿ ಪೂಜಾ ಸಾಮಗ್ರಿಗಳು ಬಿದ್ದಿರುವುದು ಕಂಡು ಬಂದಿದೆ. ಘಟನೆ ಸಂಬಂಧ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ.
SUMMARY | treasure hunt has been conducted near the Kollur road near nagara, Hosanagara taluk.
KEY WORDS | treasure hunt conducted near the Kollur road, Hosanagara taluk.