ನವೆಂಬರ್ 11 2025 ಮಲೆನಾಡು ಟುಡೆ ಸುದ್ದಿ : ಜನಶತಾಬ್ದಿ ಪ್ರಯಾಣಿಕರಿಗೆ ಸಂತಸದ ಸುದ್ದಿ, ಶಿವಮೊಗ್ಗ-ಹುಬ್ಬಳ್ಳಿ ರೈಲುಗಳ ತಿಪಟೂರು ಸ್ಟಾಪ್ ಅವಧಿ ಆರು ತಿಂಗಳು ವಿಸ್ತರಣೆ, ನೈಋತ್ಯ ರೈಲ್ವೆಯಿಂದ ಮಹತ್ವದ ಅಪ್ಡೇಟ್
ಮಹಿಳೆಯರಿಗೆ ಉಚಿತ ಹೊಲಿಗೆ ಮಷಿನ್ ವಿತರಣೆ! ಯಾರಿಗೆಲ್ಲಾ ಅವಕಾಶ! ಇಲ್ಲಿದೆ ವಿವರ
ಶಿವಮೊಗ್ಗ ಮತ್ತು ಹುಬ್ಬಳ್ಳಿ ಜನಶತಾಬ್ದಿ Jan Shatabdi ರೈಲುಗಳಿಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಪ್ರಕಟಣೆಯೊಂದನ್ನ ನೀಡಿದೆ. ನೈಋತ್ಯ ರೈಲ್ವೆ ವಿಭಾಗ, South Western Railway ನೀಡಿರುವ ಪ್ರಕಟಣೆಯ ಪ್ರಕಾರ, ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ರೈಲು ಸಂಖ್ಯೆ 12079/12080 ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್ಪ್ರೆಸ್ನ ತಿಟಟೂರು ಸ್ಟಾಪ್ ಮುಂದುವರಿಯಲಿದೆ.

ಭದ್ರಾವತಿಯ ಕುಟುಂಬಕ್ಕೆ ₹10 ಲಕ್ಷ ನೀಡಿದ ಶಿವಮೊಗ್ಗ ಕೆಎಸ್ಆರ್ಟಿಸಿ ವಿಭಾಗ
ಬೆಂಗಳೂರು-ಶಿವಮೊಗ್ಗ ನಡುವೆ ಸಂಚರಿಸುವ ರೈಲು ಸಂಖ್ಯೆ 12089/12090 ಕೆಎಸ್ಆರ್ ಬೆಂಗಳೂರು – ಶಿವಮೊಗ್ಗ ಟೌನ್ – ಕೆಎಸ್ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್ಪ್ರೆಸ್ ರೈಲುಗಳು ನಿಗದಿತ ಸಮಯದಂತೆ ತಿಪಟೂರು ನಿಲ್ದಾಣದಲ್ಲಿ ನಿಲುಗಡೆಯಾಗಲಿವೆ
ಶಿವಮೊಗ್ಗ ರೈಲ್ವೆ ನಿಲ್ದಾಣದ ಪ್ರಿಪೈಡ್ ಆಟೋ ಬಾಡಿಗೆ ವಿಚಾರದಲ್ಲಿ ದಂಡ ವಿಧಿಸಿದ ಪೊಲೀಸ್! ನಡೆದಿದ್ದು!?
ಈ ಎರಡು ಪ್ರಮುಖ ರೈಲುಗಳಿಗೆ ತಿಪಟೂರು ನಿಲ್ದಾಣದಲ್ಲಿ ನೀಡಲಾಗುತ್ತಿದ್ದ ತಾತ್ಕಾಲಿಕ ನಿಲುಗಡೆ ಅವಧಿಯನ್ನು ಇನ್ನೂ ಆರು ತಿಂಗಳ ಅವಧಿಗೆ ಮುಂದುವರೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ವಿಸ್ತರಣೆಯು ನವೆಂಬರ್ 16, 2025 ರಿಂದ 2026ರ ಮೇ 15ರವರೆಗೆ ಜಾರಿಯಲ್ಲಿರಲಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
