Shivamogga | ತುಂಗಾನದಿಯಲ್ಲಿ ಸಿಕ್ಕಿತು 24 ರ ಹರೆಯದ ಚೆಂದದ ಹುಡುಗನ ಶವ! ಸಾವಿಗಿತ್ತು ಮೂರು ಕಾರಣ! ಯುವಕರೇ ಎಚ್ಚರಿಕೆ
thirthahalli youth death in Tunga river , ವಾಟ್ಸಾಪ್ ಸ್ಟೇಟಸ್ ಹಾಕಿ ನಾಪತ್ತೆಯಾಗಿದ್ದ ಯುವಕನ ಶವ ತುಂಗಾನದಿಯಲ್ಲಿ ಪತ್ತೆಯಾಗಿದೆ
SHIVAMOGGA | MALENADUTODAY NEWS | Sep 2, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕುನಲ್ಲಿ ಯುವಕನೊಬ್ಬ ಆನ್‌ಲೈನ್ ಮನಿ ಟ್ರೇಡಿಂಗ್ ಹಾಗೂ ಪ್ರೀತಿಸುವ ಮನಸ್ಸು ಸಿಗದ ವಿಚಾರವನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿ ನಾಪತ್ತೆಯಾಗಿದ್ದ. ಈ ಬಗ್ಗೆ ಮಲೆನಾಡು ಟುಡೆ ವರದಿ : ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ವಾಟ್ಸಾಪ್ ಸ್ಟೇಟಸ್ ಹಾಕಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ!
ಹೌದು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹೀಗೀಗೆ ಅಂತಾ ಮೆಸೇಜ್ ಹಾಕಿ ನಾಪತ್ತೆಯಾಗಿದ್ದ ಯುವಕ ಇದೀಗ ತೀರ್ಥಹಳ್ಳಿಯ ತುಂಗಾನದಿಯಲ್ಲಿ ಪತ್ತೆಯಾಗಿದ್ದಾನೆ.
ಇಂದಾವರ ಗ್ರಾಮದ ಜಯದೀಪ್ ( 24 ವರ್ಷ ) ಯುವಕ ಓದಿನಲ್ಲಿ ಚೆನ್ನಾಗಿದ್ದ. ಕಷ್ಟಪುಟ್ಟ ಮೇಲೆ ಬರುವ ಕನಸು ಕಂಡಿದ್ದ. ಈ ನಡುವೆ ಆನ್‌ಲೈನ್ ಮನಿ ಟ್ರೇಡಿಂಗ್‌ನಲ್ಲಿ ಹಣ ಹಾಕಿ ಕಳೆದುಕೊಂಡಿದ್ದ, ವಯೋಸಹಜ ಪ್ರೀತಿ ನಿವೇದನೆ ಮಾಡಿದ್ದ , ಆ ಪ್ರೀತಿ ಈತನನ್ನ ತಿರಸ್ಕರಿಸಿತ್ತು. ಇತ್ತ ಹೊಸದೇನೋ ಸಾಧಿಸೋ ಹಂಬಲದಲ್ಲಿ ಕೆಲಸ ಹುಡುಕಿದ್ದ, ಅದು ಸಹ ಸಿಕ್ಕಿರಲಿಲ್ಲ. ಒಂದು ಕಡೆ ಸಾಲ, ಇನ್ನೊಂದು ಕಡೆ ತಿರಸ್ಕಾರ, ಮತ್ತೊಂದು ಕಡೆ ಸಿಗದ ಕೆಲಸದ ನಿರೀಕ್ಷೆಗಳು ಎಲ್ಲವೂ ಸೇರಿಕೊಂಡು ಯುವಕ ಜಿಗುಪ್ಸೆಗೊಂಡಿದ್ದ. ಅದನ್ನೆ ಬರೆದು ತುಂಗಾನದಿಗೆ ಹಾರಿ ತನ್ನ ಜೀವನ ಮುಗಿಸಿದ್ದಾನೆ.
ಇವತ್ತು ಈತನ ಶವಪತ್ತೆಯಾಗಿದೆ. ತುಂಗಾ ನದಿ ಸ್ಮಶಾನಕಟ್ಟೆ ಸಮೀಪ ಜಯದೀಪ್‌ನ ಶವ ಪತ್ತೆಯಾಗಿದ್ದು, ಪೊಲೀಸರು ಮಹಜರ್ ನಡೆಸಿದ್ದಾರೆ.
ಜೂನ್, ಜುಲೈ, ಆಗಸ್ಟ್ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್ ನ್ಯೂಸ್ ಇಲ್ಲಿದೆ
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?