ತಾಯಿ ಜೊತೆಗೆ ಮಾತನಾಡಿದ್ದಕ್ಕೆ ತಂದೆಯ ಸ್ನೇಹಿತನ ಮೇಲೆ ಹಲ್ಲೆ
thirthahalli police station case

SHIVAMOGGA| MALENADUTODAY NEWS | ಮಲೆನಾಡು ಟುಡೆ Mar 11, 2025
ತಾಯಿ ಜೊತೆಗೆ ಮಾತನಾಡಿದ ತಂದೆಯ ಸ್ನೇಹಿತನ ಮೇಲೆ ಮಕ್ಕಳು ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮವೊಂದರಲ್ಲಿ ವರದಿಯಾಗಿದೆ.
ಇಲ್ಲಿನ ನಿವಾಸಿಯೊಬ್ಬರು ಕೂಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ವ್ಯಕ್ತಿ ಜೊತೆಗೆ ಸ್ನೇಹ ಬೆಳೆಸಿದ್ದರು. ಅವರು ಕಳೆದ 9 ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಸ್ನೇಹಿತರಾಗಿದ್ದರಿಂದ ಅವರ ಪತ್ನಿಯು ಸಹ ಪರಿಚಯವಿದ್ದರು. ಅವರೊಂದಿಗೆ ಮಾತನಾಡಿದ ಕಾರಣಕ್ಕೆ, ಅವರ ಮಕ್ಕಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ತಮ್ಮ ತಾಯಿಯ ಜೊತೆಗೆ ಏಕೆ ಮಾತನಾಡಿದೆ ಎಂದು ಕಬ್ಬಿಣದ ರಾಡ್ ನಿಂದ ಹೊಡೆದು, ಕಲ್ಲಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಮಟನ್ ಶಾಪ್ ಒಂದರ ಮುಂದೆ ನಡೆದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸಂತ್ರಸ್ತರನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದ್ದು, ಅವರು ನೀಡಿದ ದೂರಿನನ್ವಯ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿದೆ.