ಶಿವಮೊಗ್ಗ ಹುಷಾರ್‌ | ಮನೆ ಬಾಗಿಲಲ್ಲಿ, ಲಾಕ್‌ ಮಾಡಿ ನಿಲ್ಲಿಸಿದ್ರೂ ಸೇಫ್‌ ಇಲ್ಲ | ಜಸ್ಟ್‌ 1 ನಿಮಿಷದಲ್ಲಿ ಕದಿಯುತ್ತಾರೆ ಬೈಕ್‌ | ವಿಡಿಯೋ ಸಾಕ್ಷಿ

theft of a Splendor Plus bike was caught on CCTV camera in Shivamogga.

ಶಿವಮೊಗ್ಗ ಹುಷಾರ್‌ | ಮನೆ ಬಾಗಿಲಲ್ಲಿ, ಲಾಕ್‌ ಮಾಡಿ ನಿಲ್ಲಿಸಿದ್ರೂ ಸೇಫ್‌ ಇಲ್ಲ | ಜಸ್ಟ್‌ 1 ನಿಮಿಷದಲ್ಲಿ ಕದಿಯುತ್ತಾರೆ ಬೈಕ್‌ | ವಿಡಿಯೋ ಸಾಕ್ಷಿ
CCTV camera in Shivamogga, ಬೈಕ್‌ ಕಳ್ಳತನ

SHIVAMOGGA | MALENADUTODAY NEWS | Jul 10, 2024  

 

ಶಿವಮೊಗ್ಗದ ನಾಗರಿಕರು ಗಂಭೀರ ಎಚ್ಚರಿಕೆಯನ್ನ ವಹಿಸಬೇಕಾದ ದೃಶ್ಯವೊಂದು ಮಲೆನಾಡು ಟುಡೆಗೆ ಲಭ್ಯವಾಗಿದೆ. ಬೈಕ್‌ಗೆ ಕೀ ಹಾಕಿದರೂ ಮನೆ ಬಾಗಿಲಲ್ಲೇ ನಿಲ್ಲಿಸಿದ್ದರೂ ಅದು ಸೇಫ್‌ ಅಲ್ಲ ಎನ್ನುವುದಕ್ಕೆ ಸಿಸಿ ಕ್ಯಾಮೆರಾದ ದೃಶ್ಯವೊಂದು ಸಾಕ್ಷಿ ಹೇಳುತ್ತಿದೆ. ಹ್ಯಾಂಡಲ್‌ ಲಾಕ್‌ ಮಾಡಿ ಮನೆಯ ಬಾಗಿಲ ಬದಿಯಲ್ಲಿಯೇ ನಿಲ್ಲಿಸಿದ್ದ ಸ್ಪ್ಲೆಂಡರ್‌ ಬೈಕ್‌ವೊಂದನ್ನ ಕಳ್ಳನೊಬ್ಬ ಅನಾಯಾಸವಾಗಿ ಕದ್ದೊಯ್ದ ಘಟನೆಯು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

 

malenadu today bike theft

ಜಸ್ಟ್‌ ಒಂದು ನಿಮಿಷದಲ್ಲಿ!

 

ಶಿವಮೊಗ್ಗ ಬಸ್‌ ನಿಲ್ದಾಣದ ಸಮೀಪ ಇರುವ ಪಿಡಬ್ಲ್ಯುಡಿ ಕ್ವಾಟ್ರಸ್‌ನಲ್ಲಿ ಇವತ್ತು ಬೆಳಗ್ಗೆ ಸರಿಯಾಗಿ ನಾಲ್ಕು ಗಂಟೆಗೆ ಕಳ್ಳನೊಬ್ಬ ಎಂಟ್ರಿಯಾಗಿದ್ದ. ಕೇವಲ ಒಂದು ನಿಮಿಷದಲ್ಲಿ ಅಲ್ಲಿಯ ಮನೆಯೊಂದರ ಬಳಿ ಇದ್ದ  ಸ್ಪ್ಲೆಂಡರ್ ಪ್ಲಸ್ ನ್ನ ಮಾಸ್ಟರ್‌ ಕೀ ಬಳಸಿ ಕಳವು ಮಾಡಿದ್ದಾನೆ. ಎರಡು ಸಿಸಿ ಕ್ಯಾಮರಾಗಳಲ್ಲಿ ಈ ದೃಶ್ಯ ಸೆರೆಯಾಗಿದೆ.

malenadu today bike theft

 

ಪ್ರತಿ ಮಂಗಳವಾರದ ಗಾಂಧಿ ಬಜಾರ್‌ ಸಂತೆ ಎತ್ತಂಗಡಿ | ಇನ್ಮೆಲೆ ಎಲ್ಲಿ ಸಂತೆ?

 

ಕಳ್ಳ ಹೆಜ್ಜೆಯನ್ನ ಇಟ್ಟುಕೊಂಡು ಬರುವ ಕಳ್ಳ ನೋಡಲು ಹಿಸ್ಟರಿ ಶೀಟ್‌ ಆಸಾಮೀಯಂತೆ ಕಾಣುತ್ತಿದ್ದ. ನಿಧಾನಕ್ಕೆ ಮನೆಯ ಬಳಿಗೆ ಬರುವ ಕಳ್ಳ ತನ್ನ ಬಳಿಯಿದ್ದ ಕೀ ಬಳಸಿ ಬೈಕ್‌ನ ಹ್ಯಾಂಡಲ್‌ ಲಾಕ್‌ ಓಪನ್‌ ಆಗುತ್ತಾ ಚೆಕ್‌ ಮಾಡುತ್ತಾನೆ. ಕೀ ಓಪನ್‌ ಆದ ಬೆನ್ನಲ್ಲೆ ಬೈಕ್‌ನ ಸ್ಟ್ಯಾಂಡ್‌ನ್ನ ಸದ್ದಿಲ್ಲದೆ ತೆಗೆಯುವ ಕಳ್ಳ ಅಲ್ಲಿಂದ ಬೈಕ್‌ನ್ನ ಹತ್ತು ಹೆಜ್ಜೆ ಮುಂದಕ್ಕೆ ತಳ್ಳಿ ಕೊಂಡು ಹೋಗುತ್ತಾನೆ. ಅಲ್ಲಿಂದ ಬೈಕ್‌ ಸ್ಟಾರ್ಟ್‌ ಮಾಡಿಕೊಂಡು ಪರಾರಿಯಾಗುತ್ತಾನೆ. ಬೆಳಗಿನ ಜಾವದ ನಿದ್ರೆಯಲ್ಲಿದ್ದ ಎರಿಯಾದಲ್ಲಿ ಕಳ್ಳತನ ಕರಾಮತ್ತನ್ನ ಸಿಸಿ ಕ್ಯಾಮರಾವೊಂದೇ ಕಂಡು, ರೆಕಾರ್ಡ್‌ ಮಾಡಿಕೊಂಡಿತ್ತು. 

malenadu today bike theft

 

ಶಿವಮೊಗ್ಗದಲ್ಲಿ ಕಳ್ಳ ಬೈಕ್‌ ದಂಧೆ 

 

ಇನ್ನೂ ಇಲ್ಲಿನ ನಿವಾಸಿ ಕುಮಾರಸ್ವಾಮಿ ಎಂಬವರಿಗೆ ಸೇರಿದ ಬೈಕ್‌ ಇದಾಗಿದ್ದು, ಬೈಕ್‌ ಕಳುವಾಗಿರುವ ವಿಚಾರ ಅವರಿಗೆ ಇವತ್ತು ಬೆಳಕಾದ ಬಳಿಕ ಗೊತ್ತಾಗಿದೆ. ದೊಡ್ಡಪೇಟೆ ಪೊಲೀಸ್‌ ಠಾಣೆಗೆ ವಿಚಾರ ಮುಟ್ಟಿಸಿ ದೂರುಕೊಟ್ಟಿದ್ದಾರೆ. ಶಿವಮೊಗ್ಗದಲ್ಲಿ ಒಂದಲ್ಲ ಒಂದು ಬೈಕ್‌ ನಿತ್ಯ ಕಳ್ಳತನವಾಗುತ್ತಲೇ ಇದೆ. ಅಲ್ಲದೆ ಹಳೆ ಬೈಕ್‌ ಕಳ್ಳರು ಶಿವಮೊಗ್ಗದಲ್ಲಿ ಓಡಾಡಿಕೊಂಡಿದ್ದು, ಕಳ್ತನದ ಬೈಕ್‌ಗಳ ದಂಧೆಯು ಜೋರಾಗಿ ನಡೆಯುತ್ತಿದೆ. ಸದ್ಯ ಈ ಪ್ರಕರಣವನ್ನು ದೊಡ್ಡಪೇಟೆ ಠಾಣೆಯವರು ಗಂಭೀರವಾಗಿ ಪರಿಗಣಿಸಿದ್ದು, ಆಸಾಮಿಯ ಚಹರೆ ಪರಿಶೀಲಿಸ್ತಿದ್ದಾರೆ. 

 malenadu today bike theft

A theft of a Splendor Plus bike was caught on CCTV camera in Shivamogga.

 

malenadu today bike theft

 

malenadutoday