ಒಂದುವರೆ ವರ್ಷದ ಹಳೆಯ ಕೇಸ್‌ | ದರ್ಶನ್‌ ಸೇರಿ ಮೂವರು ಅರೆಸ್ಟ್!‌ | ಏನಿದು ಹೊಳೆಹೊನ್ನೂರು ಠಾಣೆ ಪ್ರಕರಣ

Bhadravati, Holehonnur Police Station Police, theft in Arebilachi village, three arrested from Timlapura

ಒಂದುವರೆ ವರ್ಷದ ಹಳೆಯ ಕೇಸ್‌ | ದರ್ಶನ್‌ ಸೇರಿ ಮೂವರು ಅರೆಸ್ಟ್!‌ | ಏನಿದು ಹೊಳೆಹೊನ್ನೂರು ಠಾಣೆ ಪ್ರಕರಣ
Bhadravati, Holehonnur Police Station Police, theft in Arebilachi village, three arrested from Timlapura

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 4, 2025 ‌‌ 

ಭದ್ರಾವತಿ ಪೊಲೀಸರು ಒಂದುವರೆ ವರ್ಷದ ಹಿಂದೆ ದಾಖಲಾಗಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ. 24 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿರುವ ಪೊಲೀಸರು ಮೂವರನ್ನ ಅರೆಸ್ಟ್‌ ಮಾಡಿದ್ದಾರೆ. 

ಏನಿದು ಪ್ರಕರಣ 

11-05-2023 ರಂದು ಭದ್ರಾವತಿ ಅರಬಿಳಚಿ ಗ್ರಾಮದಲ್ಲಿ ಕಳ‍್ಳತನ ನಡೆದಿತ್ತು. ಇಲ್ಲಿನ ವಾಸಿ ಜಯಣ್ಣ ರವರು  ತಿರುಪತಿ ದೇವಸ್ಥಾನಕ್ಕೆ ಹೋಗಿದ್ದವರು ವಾಪಾಸ್ಸು ಬಂದು ನೋಡಿದಾಗ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಅಂದಾಜು ಮೌಲ್ಯ 17,00,000/- ರೂಗಳ 599 ಗ್ರಾಂ ಬಂಗಾರದ ಆಭರಣಗಳು ಹಾಗೂ ಅಂದಾಜು ಮೌಲ್ಯ 1,50,100/- ರೂಗಳ 3 ಕೆಜಿ 80 ಗ್ರಾಂ ಬೆಳ್ಳಿಯ ಆಭರಣಗಳು,  ಹಾಗೂ 1,00,000/- ನಗದು ಹಣ ಸೇರಿ ಒಟ್ಟು 19,80,100/- ರೂಗಳ ಮಾಲನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ  ಹೊಳೆಹೊನ್ನೂರು ಪೊಲೀಸ್ ಠಾಣೆ ಕೇಸ್‌ ದಾಖಲಾಗಿತ್ತು.

ಈ ಸಂಬಂಧ ದಿನಾಂಕ: 28-12-2024 ರಂದು ಪೊಲೀಸರು ಮೂವರನ್ನ ಬಂಧಿಸಿ ಅಂದಾಜು ಮೌಲ್ಯ 24,50,000/- ರೂಗಳ 350 ಗ್ರಾಂ ಬಂಗಾರದ ಆಭರಣಗಳು ಹಾಗೂ ಅಂದಾಜು ಮೌಲ್ಯ 2,00,000/- ರೂಗಳ 2 ಕೆ.ಜಿ 500 ಗ್ರಾಂ ತೂಕದ ಬೆಳ್ಳಿಯ ಅಭರಣಗಳು ಸೇರಿ ಒಟ್ಟು ಅಂದಾಜು ಮೌಲ್ಯ 26,50,000/- ರೂಗಳ ಬಂಗಾರ ಮತ್ತು ಬೆಳ್ಳಿ ಒಡವೆಗಳನ್ನು ಅಮಾನತು ಪಡಿಸಿಕೊಂಡಿದ್ದಾರೆ. 

ಬಂಧಿತರು

1)ದರ್ಶನ್, 21 ವರ್ಷ, ತಿಮ್ಲಾಪುರ ಕೊರಚರ ಹಟ್ಟಿ ಗ್ರಾಮ ಭದ್ರಾವತಿ, 

2) ಧನಂಜಯ, 24 ವರ್ಷ, ತಿಮ್ಲಾಪುರ ಕೊರಚರ ಹಟ್ಟಿ ಗ್ರಾಮ ಭದ್ರಾವತಿ, 

3) ರವಿ,  ತಿಮ್ಲಾಪುರ ಕೊರಚರ ಹಟ್ಟಿ ಗ್ರಾಮ ಭದ್ರಾವತಿ

SUMMARY | Bhadravati Holehonnur Police Station Police, theft in Arebilachi village, three arrested from Timlapura

KEY WORDS | Bhadravati, Holehonnur Police Station Police, theft in Arebilachi village, three arrested from Timlapura