ಶಿವಮೊಗ್ಗದಲ್ಲಿ ಮಳೆ ಜೊತೆಗೆ ಹೆಚ್ಚಾಯ್ತಾ ಡೆಂಗ್ಯು?| ಒಂದೇ ವಾರದಲ್ಲಿ ಇಬ್ಬರ ಸಾವು |
suspected dengue death has been reported in Shivamogga amidst heavy rains.

SHIVAMOGGA | MALENADUTODAY NEWS | Jul 17, 2024 ಮಲೆನಾಡು ಟುಡೆ
ಮಳೆಯ ಅಬ್ಬರದ ನಡುವೆ ಶಿವಮೊಗ್ಗದಲ್ಲಿ ಶಂಕಿತ ಡೆಂಗ್ಯೂ ಓರ್ವ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಮೃತರನ್ನ ಹೊಸನಗರ ತಾಲ್ಲೂಕು ರಿಪ್ಪನ್ ಪೇಟೆ ಮೂಲದವರು ಎನ್ನಲಾಗಿದೆ. ಆಶಿಕ್ ರಸೂಲ್ (27) ಮೃತಪಟ್ಟವರು.
ಕಳೆದ ಒಂದು ವಾರದ ಅವಧಿಯಲ್ಲಿ ಶಂಕಿತ ಡೆಂಗ್ಯು ಇಬ್ಬರನ್ನು ಬಲಿ ಪಡೆದುಕೊಂಡಿದೆ. ಹೊಸನಗರ ರಸ್ತೆಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಆಶಿಕ್ ಅವರನ್ನು ತೀವ್ರ ಜ್ವರ ಕಾಡುತ್ತಿತ್ತು. ಹಾಗಾಗಿ ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿತ್ತು. ನಿನ್ನೆ ಮಂಗಳವಾರ ಸಂಜೆ ಅವರು ಮೃತಪಟ್ಟರು. ಇತ್ತೀಚೆಗೆ ರಶ್ಮಿ ನಾಯಕ್ ಎಂಬವರೂ ಡೆಂಗ್ಯುನಿಂದ ಮೃತಪಟ್ಟಿದ್ದರು.
A suspected dengue death has been reported in Shivamogga amidst heavy rains.