ಸಚಿವ ಮಧು ಬಂಗಾರಪ್ಪರ ವಿರುದ್ಧ INSTAGRAM ನಲ್ಲಿ ಪೋಸ್ಟ್‌ ಹಾಕಿದವನ ವಿರುದ್ಧ ಸುಮುಟೋ ಕೇಸ್‌

suo motu case has been registered at Vinobanagar police station in Shivamogga for allegedly posting derogatory posts against Education Minister Madhu Bangarappa.

ಸಚಿವ ಮಧು ಬಂಗಾರಪ್ಪರ ವಿರುದ್ಧ INSTAGRAM ನಲ್ಲಿ ಪೋಸ್ಟ್‌ ಹಾಕಿದವನ ವಿರುದ್ಧ ಸುಮುಟೋ ಕೇಸ್‌
suo motu case, Vinobanagar police station,Shivamogga suo motu case for derogatory posts against Education Minister Madhu Bangarappa 

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 29, 2024 ‌ 

ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪ ಸಂಬಂಧ ಶಿವಮೊಗ್ಗದ ಪೊಲೀಸ್‌ ಠಾಣೆಯೊಂದರಲ್ಲಿ ಸುಮೊಟೋ ಕೇಸ್‌ ದಾಖಲಾಗಿದೆ. ಪ್ರಕರಣದ ವಿವರ ಹೀಗಿದೆ. 

ಸಚಿವ ಮಧು ಬಂಗಾರಪ್ಪ ಅವರ ಬಗ್ಗೆ ಎಕ್ಸ್ ಮತ್ತು ಇನ್‍ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದವನ ವಿರುದ್ಧ  ವಿನೋಬ ನಗರ  ಪೊಲೀಸ್‌ ಠಾಣೆಯ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. ನಗರ ಮೋಹಿತ್‌ ಎಂಬವರ ವಿರುದ್ಧ ಕೇಸ್‌ ದಾಖಲಾಗಿದೆ. 

ಇವರು ಸಚಿವ ಮಧು ಬಂಗಾರಪ್ಪರವರ ಹೇಳಿಕೆಯೊಂದನ್ನ ಆಧರಿಸಿ, ಅವರ ವಿರುದ್ದ ವೈಯಕ್ತಿಕ ನಿಂದನೆ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದರು. ಈ ಸಂಬಂಧ ವಿನೋಬನಗರ ಪೊಲೀಸ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಯ ಕುರಿತು ಏಕವಚನದಲ್ಲಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಸರ್ಕಾರದ ಘನತೆಗೆ ಧಕ್ಕೆ ತರುವಂತಹ ಹಾಗೂ ಸರ್ಕಾರದ ಯೋಜನೆಯ ವಿರುದ್ಧವಾಗಿ ಸುಳ್ಳು ಮಾಹಿತಿ ಪ್ರಸಾರ ಮಾಡಿ ಸಾರ್ವಜನಿಕರನ್ನು ಸರ್ಕಾರದ ವಿರುದ್ಧ ದಂಗೆ ಏಳಿಸುವ ಪ್ರಚೋದಿಸಿದ ಆರೋಪವನ್ನ ಇವರ ವಿರುದ್ಧ ಮಾಡಲಾಗಿದೆ.  

SUMMARY | A suo motu case has been registered at Vinobanagar police station in Shivamogga for allegedly posting derogatory posts against Education Minister Madhu Bangarappa.

KEY WORDS  | suo motu case, Vinobanagar police station,Shivamogga, suo motu case for derogatory posts against Education Minister Madhu Bangarappa