Suo Motu Case : ಬಡವರಿಗೆ ನ್ಯಾಯಯುತ ಹಕ್ಕುಗಳನ್ನು ಖಚಿತಪಡಿಸಲು ಜಾರಿಗೆ ತಂದಿರುವ ಜಾತಿ ಗಣತಿಯನ್ನು ವಿರೋಧಿಸುತ್ತಿರುವವರ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ (ಸುಮೊಟೊ) ಪ್ರಕರಣ ದಾಖಲಿಸಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 1961 ರಲ್ಲಿಯೇ ಪಂಡಿತ್ ಜವಾಹರಲಾಲ್ ನೆಹರೂ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ರಾಜ್ಯ ಸರ್ಕಾರಗಳಿಗೆ ಜಾತಿ ಗಣತಿ ನಡೆಸಲು ಅಧಿಕಾರ ನೀಡಿದ್ದಾರೆ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಲ್ಲೂ ನ್ಯಾಯಾಲಯವೇ ಜಾತಿವಾರು ಅಂಕಿ-ಅಂಶಗಳನ್ನು ಕೇಳುತ್ತದೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (EWS) ಮೀಸಲಾತಿ ನೀಡಿದಾಗ ಆಕ್ಷೇಪವಿಲ್ಲದವರು, ಈಗ ಜಾತಿ ಗಣತಿಗೆ ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಚಿವರು ಪ್ರಶ್ನಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಜಾತಿ ಗಣತಿಯನ್ನು ವಿರೋಧಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಬಿಜೆಪಿ ನಾಯಕರೇ ನಿಮಗೆ ಇದರ ಅವಶ್ಯಕತೆ ಇಲ್ಲದಿರಬಹುದು, ಆದರೆ ನಿಮ್ಮ ಮನೆಯಲ್ಲಿ ದುಡಿಯುವ ಬಡವರಿಗೆ ಈ ಗಣತಿಯ ಅವಶ್ಯಕತೆ ಬಹಳ ಇದೆ. ಇದನ್ನು ವಿರೋಧಿಸುವ ಮೂಲಕ ಯಾವ ಸಂದೇಶ ನೀಡಲು ಹೊರಟಿದ್ದೀರಿ ಎಂದರು.ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಮೀಕ್ಷೆಯಲ್ಲಿ ಭಾಗಿಯಾದವರ ಡೇಟಾ ಕದಿಯಲಾಗುತ್ತದೆ ಎಂದು ಆರೋಪಿಸಿರುವ ಬಗ್ಗೆ ಮಾತನಾಡಿದ ಸಚಿವರು, “ಇದಕ್ಕೆ ಯಾಕೆ ಆಕ್ಷೇಪ? ಇದೇ ಬಿಜೆಪಿ ಸರ್ಕಾರ ಅದಾನಿ ಮತ್ತು ಅಂಬಾನಿಗೆ ಕದ್ದು ನೀಡಿದೆ,” ಎಂದು ಆರೋಪಿಸಿದರು
Suo Motu Case : ಶೇ. 56.6ರಷ್ಟು ಸಮೀಕ್ಷೆ ಪೂರ್ಣ: ನೆಟ್‌ವರ್ಕ್ ಸಮಸ್ಯೆಯಿಂದ ಅಡಚಣೆ
ರಾಜ್ಯದಲ್ಲಿ ಜಾತಿ ಗಣತಿಯ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ ಸಚಿವರು, ಇದುವರೆಗೆ ರಾಜ್ಯದಲ್ಲಿ ಶೇ. 56.6 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಸುಮಾರು 1.5 ಲಕ್ಷ ಶಿಕ್ಷಕರು ಈ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಎಂದರು ಹಾಗೆಯೇ ಜಿಲ್ಲೆಯ ತಾಲೂಕುಗಳಲ್ಲಿ ಇದುವರೆಗೂ ಜಾತಿಗಣತಿ ಎಷ್ಟು ಪ್ರಮಾಣದಲ್ಲಿ ಪೂರ್ಣಗೊಂಡಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲೆಯ ಒಟ್ಟು ಪ್ರಗತಿ: ಶೇ. 63.46
ಸೊರಬ: ಶೇ. 77
ಶಿಕಾರಿಪುರ: ಶೇ. 70
ಭದ್ರಾವತಿ: ಶೇ. 64
ಸಾಗರ: ಶೇ. 62
ಶಿವಮೊಗ್ಗ ತಾಲೂಕು: ಶೇ. 56
ತೀರ್ಥಹಳ್ಳಿ: ಶೇ. 57
ಕೆಲವೆಡೆ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸಮೀಕ್ಷೆಯ ಪ್ರಗತಿ ನಿಧಾನವಾಗಿದೆ. ಸಮೀಕ್ಷೆಯನ್ನು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ ಎಂದರು
Suo Motu Case ಹಬ್ಬ ಮರೆತು ದುಡಿದ ಶಿಕ್ಷಕರಿಗೆ ಸನ್ಮಾನ: “ಅಂಬೇಡ್ಕರ್ ಸನ್ಮಾನಿಸಿದಷ್ಟು ಖುಷಿ”
ಜಾತಿ ಗಣತಿ ಕಾರ್ಯದಲ್ಲಿ ಸತತವಾಗಿ ದುಡಿದ ಶಿಕ್ಷಕರನ್ನು ಸಚಿವರು ಅಭಿನಂದಿಸಿದರು. “ಶಿಕ್ಷಕರು ಹಬ್ಬ ಹರಿದಿನಗಳನ್ನು ಸಹ ಮರೆತು ನಮ್ಮ ಸರ್ಕಾರದೊಡನೆ ಜಾತಿ ಗಣತಿಯಲ್ಲಿ ಭಾಗಿಯಾಗಿದ್ದಾರೆ. ಅವರಿಗೆಲ್ಲ ಸನ್ಮಾನ ಮಾಡುತ್ತಿರುವುದು ಖುಷಿಯಾಗಿದೆ,” ಎಂದ ಅವರು, ಶಿಕ್ಷಕರಿಗೆ ಸನ್ಮಾನ ಮಾಡುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸನ್ಮಾನ ಮಾಡಿದಷ್ಟೇ ಖುಷಿ ನೀಡುತ್ತಿದೆ ಎಂದರು.

