ಹುಡುಗಿ ಮನೆಯ ಕಾಂಪೌಂಡ್‌ನೊಳಗೆ ಗಾಂಜಾ ಎಸೆದು ಸಿಕ್ಕಿಬಿದ್ದ ಅಧಿಕಾರಿ | ಹೀಗೂ ದ್ವೇಷ ಮಾಡ್ತಾರಾ?
Summary of the case registered in Sagar taluk

SHIVAMOGGA | MALENADUTODAY NEWS | Jul 31, 2024
ಮದುವೆಯಾಗಲು ಹೆಣ್ಣು ಕೊಡಲಿಲ್ಲ ಅಂತಾ ವಿಚಿತ್ರ ರೀತಿಯಲ್ಲಿ ದ್ವೇಷ ತೀರಿಸಿಕೊಳ್ಳಲು ಹೋಗಿ ಖುದ್ದು ಪೊಲೀಸರ ಅತಿಥಿಯಾಗಿದ್ದಾರೆ ಸರ್ಕಾರಿ ಅಧಿಕಾರಿಯೊಬ್ಬರು.
ಮಣಿಪಾಲ್‌ಗೆ ಹೋಗುತ್ತಿದ್ದ ಕಾರು ಮೇಗರವಳ್ಳಿ ಬಳಿ ಪಲ್ಟಿ | ತಲೆಕೆಳಗಾಗಿ ನಿಂತ ವಾಹನ
ಏನಿದು ಪ್ರಕರಣ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ನಡೆದ ಘಟನೆ ಇದಾಗಿದೆ. ದಾಖಲಾದ ಎಫ್‌ಐಆರ್ ಪ್ರಕಾರ, ಇಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರೊಬ್ಬರು ವೈಯಕ್ತಿಕ ದ್ವೇಷದ ಹಿನ್ನೆಲೆ ಹೆಣ್ಣಿನ ಮನೆಯವರನ್ನು ಗಾಂಜಾ ಕೇಸ್ನಲ್ಲಿ ಸಿಕ್ಕಿಹಾಕಿಸಲು ಹೋಗಿ ತಾನೇ ತಗ್ಲಾಕಿಕೊಂಡಿದ್ದಾರೆ.
ಇದೇ ಸಾಗರದ ನಿವಾಸಿಯೊಬ್ಬರ ಬಳಿ , ಸರ್ಕಾರಿ ಅಧಿಕಾರಿಯೊಬ್ಬರು ಮದುವೆ ಸಂಬಂಧದ ಪ್ರಪೋಸಲ್ ಇಟ್ಟಿದ್ದರು. ಆದರೆ ಅದಕ್ಕೆ ಹೆಣ್ಣಿನ ಮನೆಯವರು ಒಪ್ಪಿರಲಿಲ್ಲ. ಈ ಕಾರಣಕ್ಕೆ ಅವರ ಮನೆಯವರ ವಿರುದ್ಧ ದ್ವೇಷ ತೀರಿಸಿಕೊಳ್ಳಲು ನಿರ್ಧರಿಸಿದ್ದ ಅಧಿಕಾರಿ, ಹೆಣ್ಣಿನ ಮನೆ ಕಡೆಯವರನ್ನ ಗಾಂಜಾ ಕೇಸ್‌ನಲ್ಲಿ ಸಿಕ್ಕಿಸಲು ಪ್ಲಾನ್ ಮಾಡಿದ್ದಾರೆ ಎಂಬುದು ಆರೋಪ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಇಷ್ಟಕ್ಕೂ ನಡೆದಿದ್ದೇನು?
ಸರ್ಕಾರಿ ಅಧಿಕಾರಿಯ ಮದುವೆ ಪ್ರಪೋಸಲ್ ತಿರಸ್ಕರಿಸಿದ ಮನೆಯವರಿಗೆ ಒಂದು ದಿನ ಶಾಕ್ ಎದುರಾಗಿತ್ತು. ಇದ್ದಕ್ಕಿದ್ದಂತೆ ಮನೆಗೆ ಬಂದ ಅಬಕಾರಿ ಇಲಾಖೆ ಅಧಿಕಾರಿಗಳು ನಿಷೇಧಿತ ಗಾಂಜಾಗಾಗಿ ಮನೆಯಲ್ಲಿ ತಪಾಸಣೆ ನಡೆಸಿದ್ದರು. ಆದರೆ ಅವರಿಗೆ ಏನೂ ಸಹ ಅಲ್ಲಿ ಸಿಕ್ಕಿರಲಿಲ್ಲ. ಆದರೆ ಮನೆಯವರಿಗೆ ಇದೇಕೆ ಹೀಗಾಯ್ತು ಎನ್ನುವ ಅನುಮಾನ ಕಾಡಿದೆ.
ಆ ಬಳಿಕ ಮನೆಯ ಹಿಂಬದಿ ಸ್ವಚ್ಚ ಮಾಡುತ್ತಿದ್ದ ಸಂದರ್ಭದಲ್ಲಿ ಮನೆಯವರಿಗೆ ಕರಿ ಜರಿಕೊಟ್ಟೆ ಸಿಕ್ಕಿದೆ. ಅದನ್ನ ತೆಗೆದು ನೋಡಿದಾಗ ಅದರಲ್ಲಿ ಗಾಂಜಾ ಪ್ಯಾಕೆಟ್ ಇರುವುದು ಗೊತ್ತಾಗಿದೆ. ಸುಮಾರು 15 ರಿಂದ 20 ಗ್ರಾಂ ತೂಕವುಳ್ಳ 19 ಗಾಂಜಾ ಪ್ಯಾಕೆಟ್ ಗಳು ಆ ಕವರ್ ನಲ್ಲಿದ್ದವು. ಇದರಿಂದ ಅನುಮಾನಗೊಂಡ ಮನೆಯವರು ತಕ್ಷಣವೆ ಮನೆಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾದ ದೃಶ್ಯಗಳನ್ನ ವೀಕ್ಷಿಸಿದ್ದಾರೆ.
ಮಣಿಪಾಲ್‌ಗೆ ಹೋಗುತ್ತಿದ್ದ ಕಾರು ಮೇಗರವಳ್ಳಿ ಬಳಿ ಪಲ್ಟಿ | ತಲೆಕೆಳಗಾಗಿ ನಿಂತ ವಾಹನ
ದೃಶ್ಯದಲ್ಲಿ ವ್ಯಕ್ತಿಯೊಬ್ಬ ಮನೆಯ ಹಿಂಬದಿಗೆ ಬಂದು ಗಾಂಜಾ ಪ್ಯಾಕೇಟ್‌ಗಳನ್ನು ಎಸೆದಿರುವುದು ಮನೆಯವರ ಗಮನಕ್ಕೆ ಬಂದಿದೆ. ತಡಮಾಡದೇ ಪೊಲೀಸರಿಗೆ ಹೀಗೀಗೆ ಅಂತಾ ದೂರುಕೊಟ್ಟಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಗಾಂಜಾ ಎಸೆದವರನ್ನ ಹಿಡಿದು ವಿಚಾರಿಸಿದಾಗ, ಸರ್ಕಾರಿ ಅಧಿಕಾರಿಯ ಪ್ಲಾನ್ ಹೊರಕ್ಕೆ ಬಂದಿದೆ. ತಮಗೆ ಹೆಣ್ಣು ಕೊಡಲಿಲ್ಲ ಎಂಬ ಕಾರಣಕ್ಕೆ ಅಧಿಕಾರಿ ತಮ್ಮ ಸ್ನೇಹಿತನ ಬಳಿ ಈ ರೀತಿ ಕೃತ್ಯವೆಸಗಿಸಿದ್ದ ಎಂಬುದು ಗೊತ್ತಾಗಿದೆ.
ಸದ್ಯ ಈ ಸಂಬಂಧ ಎಫ್‌ಐಆರ್ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆದರೆ ಸಾಗರ ಜನತೆ ಹೀಗೂ ಮಾಡ್ತಾರೆಯೇ?ಎಂದು ಪ್ರಶ್ನಿಸುತ್ತಿದ್ದಾರೆ.