ಮಾಲತಿ ನದಿಗೆ ಹಾರಿದ 20 ವರ್ಷದ ವಿದ್ಯಾರ್ಥಿ | ನಡೆದಿದ್ದೇನು?

student died by jumping into the Malati River , Shivamogga

ಮಾಲತಿ ನದಿಗೆ ಹಾರಿದ 20 ವರ್ಷದ ವಿದ್ಯಾರ್ಥಿ | ನಡೆದಿದ್ದೇನು?
student died by jumping into the Malati River , Shivamogga

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 18, 2024 ‌‌ 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕುನಲ್ಲಿ ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಲ್ಲಿನ ಮಾಲತಿ ನದಿಗೆ ಹಾರಿ 20 ವರ್ಷದ ಪದವಿ ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರನ್ನು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರಳ್ಳಿ ಗ್ರಾಮದ ನಿವಾಸಿ ಧ್ರುವ ಎಂದು ಗುರುತಿಸಲಾಗಿದೆ.

ಧ್ರುವ ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ. ರಕ್ಷಣಾ ಸಿಬ್ಬಂದಿ ಈತನ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ. ಆಗುಂಬೆ ಪೊಲೀಸರು ಸ್ಥಳ ಪರಿಶೀಲನೆ ಮುಗಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.  ಧ್ರುವ ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

SUMMARY | 20-year-old degree student allegedly died by suicide by jumping into the Malati River in Shivamogga.

KEY WORDS | student died by jumping into the Malati River , Shivamogga