ರಿಪ್ಪನ್‌ಪೇಟೆ ಕಾಲೇಜಿನಲ್ಲಿ ಓದುತ್ತಿದ್ದ ಆನಂದಪುರದ ಯುವಕ ಆತ್ಮಹತ್ಯೆ !
student named Manush D. committed suicide
SHIVAMOGGA | MALENADUTODAY NEWS | Jul 14, 2024
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್ ಪೇಟೆಯ ಕಾಲೇಜೊಂದರಲ್ಲಿ ಓದುತ್ತಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಸೆಮಿಸ್ಟರ್ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಫೇಲ್ ಆಗಿದ್ದಕ್ಕೆ ಬೇಸತ್ತು ಈ ಕೃತ್ಯವೆಸಗಿಕೊಂಡ ಬಗ್ಗೆ ಹೇಳಲಾಗಿದೆ. ರಿಪ್ಪನ್ ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ ಎ ಓದುತ್ತಿದ್ದ ವಿದ್ಯಾರ್ಥಿ ಮನುಷ್ ಡಿ(19) ಮೃತ ಯುವಕ ಈತ ಆನಂದಪುರ ಸಮೀಪದ ಅಡೂರು ಗ್ರಾಮದ ನಿವಾಸಿಯಾಗಿದ್ದಾನೆ.
ಇತ್ತೀಚೆಗೆ ನಡೆದ ಸೆಮಿಸ್ಟರ್ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಮನುಷ್ ಫೇಲ್ ಆಗಿದ್ದ. ಆ ಬಳಿಕ ಖಿನ್ನತೆಗೊಳಗಾಗಿದ್ದ ಎಂದು ಹೇಳಲಾಗುತ್ತಿದೆ. ಈ ನಡುವೆ ಕಳೆದ ಶುಕ್ರವಾರ ರಾತ್ರಿ ಆನಂದಪುರ ಸಮೀಪದ ಅಡೂರು ಗ್ರಾಮದ ತನ್ನ ನಿವಾಸದಲ್ಲಿ ಕಳೆನಾಶಕ ಸೇವಿಸಿದ್ದಾನೆ. ಆ ಬಳಿಕ ಆತನನ್ನ ಆನಂದಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಶಿವಮೊಗ್ಗದ ಮೆಗ್ಗಾನ್ ಗೆ ಶಿಫ್ಟ್ ಮಾಡಲಾಗಿತ್ತು . ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
A 19-year-old student named Manush D. committed suicide after failing his English exam. He was a BA student at Government First Grade College in Ripponpet, Shivamogga district. Manush was reportedly depressed after failing the exam and consumed poison at his residence in Aduru village last Friday night. He was taken to Anandapura Government Hospital and later shifted to McGann Hospital in Shivamogga, where he died yesterday.