SHIVAMOGGA | MALENADUTODAY NEWS | Aug 11, 2024 ಮಲೆನಾಡು ಟುಡೆ
ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರು ರೌಡಿ ಪರೇಡ್ ನಡೆಸಿದ್ದಾರೆ. ಎಲ್ ಆಂಡ್ ಓ ವಿಚಾರದಲ್ಲಿ ಮುಂಜಾಗ್ರತಾ ಕ್ರಮವಾಗಿ ದಿನಾಂಕಃ 09-08-2024 ರಂದು ಸಂಜೆ ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದ ಆವರಣದಲ್ಲಿ ಎಸ್‌ಪಿ ಮಿಥುನ್ ಕುಮಾರ್ ಜಿ.ಕೆ ರೌಡಿ ಪರೇಡ್‌ನಲ್ಲಿ ಹಿಸ್ಟರಿ ಶೀಟರ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಎಸ್‌ಪಿ ಮಿಥುನ್ ಕುಮಾರ್ ವಾರ್ನಿಂಗ್
ಒಟ್ಟು 110 ಜನ ರೌಡಿಗಳನ್ನ ಪರೆಡ್‌ಗೆ ಪೊಲೀಸರು ಹಾಜರುಪಡಿಸಿದ್ದರು. ಈ ವೇಳೆ ಅವರುಗಳ ವೈಯಕ್ತಿಕ ವಿವರ ಜೊತೆಗೆ ಆದಾಯದ ಮೂಲಗಳನ್ನು ಅರಿತ ಎಸ್‌ಪಿ ಮಿಥುನ್ ಕುಮಾರ್, ರವರು ಕೆಲವೊಂದು ಎಚ್ಚರಿಕೆಗಳನ್ನ ನೀಡಿದ್ದಾರೆ.

1) ವಾರದಲ್ಲಿ 02 ಬಾರಿ ಕಡ್ಡಾಯವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗಿ ಹಾಜರಾತಿ ನೀಡುವುದು.
2) ನಿಮ್ಮ ಚಟುವಟಿಕೆ ಮತ್ತು ಚಲನ ವಲನಗಳ ಮೇಲೆ ನಿಗಾ ಇಡಲಾಗಿದ್ದು, ಒಂದು ವೇಳೆ ಯಾವುದಾದರೂ ಕಾನೂನು ಬಾಹೀರ ಚಟುವಟಿಕೆ ಮತ್ತು ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗುವುದು ಕಂಡು ಬಂದಲ್ಲಿ, ಗಡಿಪಾರು ಮತ್ತು ಗೂಂಡಾ ಕಾಯ್ದೆಯಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು.
3) ನಿಮ್ಮ ಆದಾಯದ ಮೂಲ ಮತ್ತು ಸ್ನೇಹಿತರ ಕುರಿತು ಪೊಲೀಸ್ ಇಲಾಖೆಯಿಂದ ನಿರಂತರವಾಗಿ ನಿಗಾ ಇಡಲಾಗುವುದು, ಒಂದು ವೇಳೆ ನೀವು ಸ್ನೇಹಿತರನ್ನು ಸೇರಿಸಿಕೊಂಡು ಗುಂಪು ಕಟ್ಟಿಕೊಂಡು ಅಡ್ಡಗಳನ್ನು ಮಾಡಿಕೊಳ್ಳುವುದು, ರಾತ್ರಿ ವೇಳೆ ಮನೆಯಲ್ಲಿರದೇ ಅನಾವಶ್ಯಕವಾಗಿ ಹೊರಗಡೆ ಸುತ್ತಾಡುವುದು ಕಂಡು ಬಂದಲ್ಲಿ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು.
4) ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡಿಸಿಕೊಂಡು, ಶಿಸ್ತಾಗಿ ಕಾಣುವಂತಹ ಉಡುಪುಗಳನ್ನು ಧರಿಸಿ ಮತ್ತು ಕಾನೂನನ್ನು ಗೌರವಿಸಿ ಹಾಗೂ ಕಾನೂನನ್ನು ಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವಿಸಿ
ಹೀಗೆ ಎಚ್ಚರಿಕೆಯನ್ನ ನೀಡಿದ ಎಸ್‌ಪಿ ಮಿಥುನ ಕುಮಾರ್ ಒಳ್ಳೆಯ ರೀತಿಯಲ್ಲಿ ಬದುಕಿದರೆ ನಿಮಗೆ ಒಳ್ಳೆಯದು. ಇಲ್ಲದೇ ಹೋದಲ್ಲಿ ಪೊಲೀಸ್ ಇಲಾಖೆಯು ನಿಮ್ಮ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುತ್ತದೆ ಎಂದಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ