ದಕ್ಷಿಣ ಕನ್ನಡ, ಉಡುಪಿಯಲ್ಲಿ ಸೊರಬ ಮಣಿಕಂಠನ ಕೈ ಚಳಕ | 20 ಕೇಸ್‌ನಲ್ಲಿ ಸಿಕ್ಕಿಬಿದ್ದ ಆರೋಪಿ

soraba man caught in mangalore theft case

ದಕ್ಷಿಣ ಕನ್ನಡ, ಉಡುಪಿಯಲ್ಲಿ ಸೊರಬ ಮಣಿಕಂಠನ ಕೈ ಚಳಕ | 20 ಕೇಸ್‌ನಲ್ಲಿ ಸಿಕ್ಕಿಬಿದ್ದ ಆರೋಪಿ
soraba man caught in mangalore theft case

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 4, 2025 ‌‌ ‌

ದಕ್ಷಿಣಕನ್ನಡದಲ್ಲಿ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ನಿವಾಸಿಯೊಬ್ಬ ಬೈಕ್‌ ಕಳ್ಳತನ ಪ್ರಕರಣಗಳ ಮಾಸ್ಟರ್‌ ಮೈಂಡ್‌ ಆಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.  ಇಲ್ಲಿ ನಡೆಯುವ ಕಂಬಳ, ಜಾತ್ರೆ ಸೇರಿದಂತೆ, ಬಸ್ಸು, ರೈಲ್ವೆ ನಿಲ್ದಾಣಗಳಲ್ಲಿ ಪಾರ್ಕ್ ಮಾಡಿದ್ದ ಬೈಕ್ ಗಳನ್ನು ಕದಿಯುತ್ತಿದ್ದ ಗ್ಯಾಂಗ್‌ನ್ನು ಪೊಲೀಸರು ಅರೆಸ್ಟ್‌ ಮಾಡಿದ್ದು, ಒಟ್ಟು ಸೊರಬದ ವ್ಯಕ್ತಿ ಸೇರಿ ನಾಲ್ವರನ್ನು ಅರೆಸ್ಟ್‌ ಮಾಡಿದ್ದಾರೆ. ಕಂಕನಾಡಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆದಿದೆ. 

 

ಶಿವಮೊಗ್ಗ ಜಿಲ್ಲೆಯ ಸೊರಬದ ಮಣಿಕಂಠ ಗೌಡ ಕೆ ಪ್ರಕರಣದ ಮಾಸ್ಟರ್‌ ಮೈಂಡ್‌ ಈತ, ಮೂಡುಬಿದರೆಯಲ್ಲಿ ವಾಸವಿದ್ದ. ಮೆಕಾನಿಕ್‌ ಆಗಿದ್ದ, ಬೈಕ್‌ ಇಗ್ನಿಷನ್‌ ಸಾಕೆಟ್‌ ಪ್ಲಗ್‌ ತಪ್ಪಿಸಿ ಬೈಕ್‌ಗಳನ್ನು ಕ್ಷಣಾರ್ಧದಲ್ಲಿ ಕಳ್ಳತನ ಮಾಡಲು ಈತ ನೆರವಾಗುತ್ತಿದ್ದ. ಹೀಗೆ ಕದ್ದ ಬೈಕ್‌ಗಳನ್ನು ಪಾರ್ಟ್‌ ವೈಸ್‌ ಮಾರಾಟ  ಮಾಡುತ್ತಿದ್ದ. ಹೆಚ್ಚಾಗಿ ರಿಸೇಲ್‌ ವ್ಯಾಲ್ಯು ಇರುವ ಬೈಕ್‌ಗಳನ್ನೆ ಈತನ ಕದಿಯುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. 

ಪೊಲೀಸರು ಮಣಿಕಂಠನಿಂದ ಬೈಕ್‌ ಖರೀದಿಸುತ್ತಿದ್ದ ಕಾರ್ಕಳದ ಸತೀಶ್‌ ಬಂಗೇರ, ಮೂಡುಬಿದಿರೆಯ ದೀಕ್ಷಿತ್‌, ಹಾಗೂ ತಾಳಿಕೋಟೆಯ ಸಂಗಣ್ಣಹೊನ್ನಳ್ಳಿಯವರನ್ನ ಬಂಧಿಸಿದ್ದಾರೆ. ಇವರು ಮಣಿಕಂಠನಿಂದ ಕಡಿಮೆ ಬೆಲೆಗೆ ಬೈಕ್‌ ಖರೀದಿಸಿ, ಅವುಗಳನ್ನು ದಾಖಲೆಗಳಿಲ್ಲದೆ ಮತ್ತೊಂದು ಕಡೆಗೆ ಮಾರುತ್ತಿದ್ದರು. ಇವರಿಂದ ಒಟ್ಟು 20 ಬೈಕ್‌ಗಳನ್ನು ಜಪ್ತಿ ಮಾಡಿರುವ ಪೊಲೀಸರು, ಆರೋಪಿ ಮಣಿಕಂಠನ ವಿರುದ್ಧ  ಮಂಗಳೂರಿನ ಬಂದರು, ಪಾಂಡೇಶ್ವರ, ಬಜಪೆ, ಮೂಲ್ಕಿ, ಉಳ್ಳಾಲ, ಕಂಕನಾಡಿ ನಗರ ಠಾಣೆ ವ್ಯಾಪ್ತಿಯ 15 ಪ್ರಕರಣ ಮತ್ತು ಬಂಟ್ವಾಳ ನಗರ, ಗ್ರಾಮಾಂತರ, ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ 5 ಪ್ರಕರಣ ಸೇರಿ 20 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.