ತೀರ್ಥಹಳ್ಳಿಯ ತುಂಗಾ ಸೇತುವೆಯ ಕೆಳಗಡೆ ಅಸ್ತಿಪಂಜರ ಪತ್ತೆ
skeleton was found under the Tunga arch bridge in Thirthahalli taluk.
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 26, 2024
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ತುಂಗಾ ಸೇತುವೆ ಬಳಿಯಲ್ಲಿ ಅಸ್ತಿಪಂಜರವೊಂದು ಸಿಕ್ಕಿದೆ. ಈ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ಕಮಾನು ಸೇತುವೆಯ ಕೆಳಭಾಗದಲ್ಲಿ ಇವತ್ತು ಬೆಳಗ್ಗೆ ಮೀನು ಹಿಡಿಯುವವರು ಮೊದಲು ಅಸ್ತಿಪಂಜರವನ್ನ ಗಮನಿಸಿದ್ದಾರೆ. ಆ ಬಳಿಕ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ತದನಂತರ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ
ಇನ್ನೂ ಅಸ್ತಿಪಂಜರದ ಕುರುಹುಗಳು ಇನ್ನಷ್ಟ ಗೊತ್ತಾಗಬೇಕಿದೆ. ಈ ನಡುವೆ ಸ್ಥಳೀಯರು ಹೇಳುವಂತೆ ಮಳೆ ನೀರಿನಲ್ಲಿ ಹರಿದುಬಂದ ಹೆಣವೊಂದು ಬಂಡಗಲ್ಲಿನ ಬಳಿಕ ಸಿಕ್ಕಿ ಹಾಕಿಕೊಂಡಿಬಹುದು. ಅಲ್ಲಿಯೇ ಅದು ಕೊಳೇತು ಬರೀ ಮೂಳೆಗಳು ಉಳಿದು ಇದೀಗ ನೀರು ಕಡಿಮೆಯಾದ್ದರಿಂದ ಕಂಡಿರಬಹುದು ಎಂದು ಊಹಿಸಿದ್ದಾರೆ.
ಮತ್ತೆ ಕೆಲವರು ಈ ಭಾಗದಲ್ಲಿ ಕಾಣೆಯಾದವರ ವಿಚಾರವನ್ನು ಅಸ್ತಿಪಂಜರಕ್ಕೆ ಹೋಲಿಕೆ ಮಾಡಿ ಮಾತನಾಡುತ್ತಿದ್ದಾರೆ. ಸದ್ಯ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿ ತನಿಖೆಗೆ ಮುಂದಾಗಿದೆ.
SUMMARY | A skeleton was found under the Tunga arch bridge in Thirthahalli taluk.
KEY WORDS |A skeleton was found under the Tunga arch bridge in Thirthahalli taluk.