ಸಿಗಂದೂರು ಸೇತುವೆ ಪೂರ್ಣ | ವರ್ಷಾಂತ್ಯಕ್ಕೆ ಟೆಸ್ಟ್ ರನ್ | ಮೇಗೆ ಉದ್ಘಾಟನೆ | ಸಂಸದ BYR ಮಹತ್ವದ ಹೇಳಿಕೆ
sigandur bridge being constructed across the Sharavathi backwaters in Sagar taluk will be opened for public service by May 2025, mp BY Raghavendra said.
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 16, 2024
ಶಿವಮೊಗ್ಗ ಜಿಲ್ಲೆಯ ಮಹತ್ವದ ಯೋಜನೆ ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ ? ಈ ಪ್ರಶ್ನೆಗೆ ಮತ್ತೊಮ್ಮೆ ಸಂಸದ ಬಿವೈ ರಾಘವೇಂದ್ರ ಉತ್ತರಿಸಿದ್ದಾರೆ. ಸಾಗರ ತಾಲ್ಲೂಕಿನಲ್ಲಿ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸಿಗಂದೂರು ಸೇತುವೆ ಕಾಮಗಾರಿ 2025ರ ಮೇ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.
ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣೆ (ದಿಶಾ) ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡ್ತಾ ಈ ಬಗ್ಗೆ ತಿಳಿಸಿದ ಅವರು, ಸೇತುವೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಡಿಸೆಂಬರ್ ಮಾಸಾಂತ್ಯದೊಳಗೆ ಸೇತುವೆ ಮೇಲೆ ವಾಹನಗಳು ಪ್ರಾಯೋಗಿಕವಾಗಿ ಸಂಚರಿಸಲಿವೆ ಎಂದರು.
ಇದೇ ವೇಳೇ ಶಿವಮೊಗ್ಗ- ರಾಣೆಬೆನ್ನೂರು ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಶೇ. 90ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣ ಗೊಂಡಿರಬೇಕು. ಇದರಿಂದ, ಕೇಂದ್ರ ಸರ್ಕಾರಕ್ಕೆ ಅನುದಾನದ ಬೇಡಿಕೆ ಸಲ್ಲಿಸಲು ಅನುಕೂಲವಾಗಲಿದೆ. ಅಲ್ಲದೆ ಭೂಸ್ವಾದೀನಕ್ಕೆ ಸಂಬಂಧಿಸಿದಂತೆ ಯಾವುದೇ ರೈತರಿಗೆ ಹಂಚುವ ಪರಿಹಾರದಲ್ಲಿ ಅನ್ಯಾಯವಾಗಬಾರದು. ಭೂಮಿ ವಶಪಡಿಸಿಕೊಂಡ ರೈತರಿಗೂ ಸಹ ಶೇಕಡ 90ರಷ್ಟು ಹಣ ಸಂದಾಯವಾಗಿರಬೇಕು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು
SUMMARY| sigandur bridge being constructed across the Sharavathi backwaters in Sagar taluk will be opened for public service by May 2025, mp BY Raghavendra said.
KEY WORDS | sigandur bridge, Sharavathi backwaters in Sagar taluk mp BY Raghavendra said,sigandur bridge will be opened by May 2025