Siddaramaiah | ಬಿ ವೈ ವಿಜಯೇಂದ್ರ ಶಿವಮೊಗ್ಗದ ನಿವಾಸಕ್ಕೆ ಮುತ್ತಿಗೆ | ಕಾರ್ಯಕರ್ತರು ವಶಕ್ಕೆ

Siddaramaiah | B Y Vijayendra's residence in Shivamogga attacked | Activists detained

Siddaramaiah | ಬಿ ವೈ ವಿಜಯೇಂದ್ರ ಶಿವಮೊಗ್ಗದ ನಿವಾಸಕ್ಕೆ ಮುತ್ತಿಗೆ  | ಕಾರ್ಯಕರ್ತರು ವಶಕ್ಕೆ
Siddaramaiah , B Y Vijayendra, ಸಿದ್ದರಾಮಯ್ಯ, ಬಿ ವೈ ವಿಜಯೇಂದ್ರ

SHIVAMOGGA | MALENADUTODAY NEWS | Aug 8, 2024

ಶಿವಮೊಗ್ಗದಲ್ಲಿ ಇಂದು ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರವರ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಈ ವೇಳೆ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಬಿ ವೈ ವಿಜಯೇಂದ್ರರ ಮನೆಗೆ ಮುತ್ತಿಗೆ 

 

ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆಸುತ್ತಿರುವ ಷಡ್ಯಂತ್ರಕ್ಕೆ ಖಂಡನೆ ವ್ಯಕ್ತಪಡಿಸಿ ಕರ್ನಾಟಕ ಶೋಷಿತ ವರ್ಗಗಳ ಮಹಾ ಒಕ್ಕೂಟದ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ವಿಜಯೇಂದ್ರರವರ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. 

 

ಶಿವಮೊಗ್ಗ ನಗರದ ಬೈಪಾಸ್ ರಸ್ತೆಯಲ್ಲಿರುವ ವಿಜಯೇಂದ್ರ ನಿವಾಸದವರೆಗೂ ತೆರಳಿದ ಕಾರ್ಯಕರ್ತರು ಬಿ ವೈ ವಿಜಯೇಂದ್ರ ಹಾಗೂ ರಾಜ್ಯ ಬಿಜೆಪಿ ವಿರುದ್ಧ ಘೋಷಣೆಗಳನ್ನ ಕೂಗಿದರು. 

 

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

 

ಪೊಲೀಸರೊಂದಿಗೆ ಪ್ರತಿಭಟನಾಕಾರರ ಜಟಾಪಟಿ

 

ಇನ್ನೂ ಪ್ರತಿಭಟನಾಕಾರರು ಬಿ ವೈ ವಿಜಯೇಂದ್ರ  ರವರ ಮನೆ ಬಳಿ ಬರುತ್ತಲೇ ಅವರನ್ನ ಪೊಲೀಸರು ಬ್ಯಾರಿಕೇಡ್‌ ಬಳಸಿ ಅಡ್ಡಗಟ್ಟಿದರು. 

 

 

ಪ್ರತಿಭಟನಾಕಾರರು ಬ್ಯಾರಿಕೇಡ್‌ ತಳ್ಳಿ ಮುಂದಕ್ಕೆ ಹೋಗಲು ಯತ್ನಿಸಿದಾಗ ಅವರನ್ನ ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತ‍ಳ್ಳಾಟ ನಡೆದಿದೆ. 

 

ಆನಂತರ ಪೊಲೀಸ್‌ ಇಲಾಖೆ ಹೆಚ್ಚುವರಿ ಸಿಬ್ಬಂದಿಯನ್ನ ಬಳಸಿಕೊಂಡು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದಿದೆ