ಬಸ್‌ಗೆ ಬಸ್‌ ಡಿಕ್ಕಿ , ಹಲವರಿಗೆ ಪೆಟ್ಟು | ಬೈಕ್‌ ಆಕ್ಸಿಡೆಂಟ್‌ನಲ್ಲಿ ಇಬ್ಬರ ಸಾವು | ಸಾಗರ ಟೌನ್‌ನಲ್ಲಿ ಕಿರಿಕ್‌ ಕೇಸ್|‌ TOP 5 ಚಟ್‌ಪಟ್‌ ನ್ಯೂಸ್‌

shivamogga top 5 news

ಬಸ್‌ಗೆ ಬಸ್‌ ಡಿಕ್ಕಿ , ಹಲವರಿಗೆ ಪೆಟ್ಟು |  ಬೈಕ್‌ ಆಕ್ಸಿಡೆಂಟ್‌ನಲ್ಲಿ ಇಬ್ಬರ ಸಾವು | ಸಾಗರ ಟೌನ್‌ನಲ್ಲಿ ಕಿರಿಕ್‌ ಕೇಸ್|‌ TOP 5 ಚಟ್‌ಪಟ್‌ ನ್ಯೂಸ್‌
shivamogga top 5 news

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 17, 2025 ‌‌ 

ಶಿವಮೊಗ್ಗದಲ್ಲಿ ನಡೆದ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಲೆನಾಡು ಟುಡೆಯ ಇವತ್ತಿ ಟಾಪ್‌ ಫೈವ್‌ ಚಟ್‌ಫಟ್‌ ಸುದ್ದಿ

ಸುದ್ದಿ 1 | ಆಕ್ಸಿಡೆಂಟ್‌ ಇಬ್ಬರು ಸಾವು

ಶಿವಮೊಗ್ಗ ಡಿವಿಎಸ್ ವೃತ್ತದಲ್ಲಿ ನಿನ್ನೆದಿನ ಭಾನುವಾರ ದ್ವಿಚಕ್ರ ವಾಹನವೊಂದು ಪುಟ್‌ಪಾತ್‌ನ ಸ್ಟೀಲ್‌ರಾಂಡ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೋಟೆ ರಸ್ತೆ ನಿವಾಸಿ ಸವಾರ ಗೌತಮ್ ಎಂಬಾತ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ಟ್ರಾಫಿಕ್ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೊಂದು ಘಟನೆ ಸೂಳೆಬೈಲ್‌ ಬಳಿ ಸಂಭವಿಸಿದ್ದು. ಬೈಕ್‌ ಹಾಗೂ ಬಸ್‌ ನಡುವೆ ಡಿಕ್ಕಿಯಾಗಿ ಪಂಬ್ಲಿಂಗ್‌ ಕೆಲಸ ಮಾಡುತ್ತಿದ್ದ ಶ್ರೀನಿವಾಸ ಎಂಬವರು ಸಾವನ್ನಪ್ಪಿದ್ದಾರೆ. ಅವರು ಬುದ್ದ ನಗರ ನಿವಾಸಿಯಾಗಿದ್ದರು. 

ಸುದ್ದಿ 2 | ಹೋರಿ ಹಿಡಿದ ವಿಚಾರಕ್ಕೆ ಕಿರಿಕ್‌ ಕೇಸ್‌  

ಸಂಬಂಧಿಕರ ಹೋರಿ ಹಿಡಿದ ವಿಚಾರಕ್ಕೆ ಸಾಗರ ಟೌನ್‌ನ ಈದ್ಗಾ ಮೈದಾನದ ಹತ್ತಿರ ಕಿರಿಕ್‌ ಆಗಿದ್ದು ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಕಲ್ಲಿನಿಂದ ತಲೆಗೆ ಹೊಡೆದ ಘಟನೆ ನಡೆದಿದೆ. ಸಂಬಂಧಿಕರ ಹೋರಿ ಹಿಡಿದಿದ್ದೇಕೆ ಎಂದು ಪ್ರಶ್ನಿಸಿ ಈ ರೀತಿ ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿದೆ. ಈ ವೇಳೆ ಅಲ್ಲಿಯೇ ಇದ್ದ ಇನ್ನೊಬ್ಬರು ಗಲಾಟೆ ತಪ್ಪಿಸಿ, ಗಾಯಾಳುವನ್ನು ಆಸ್ಪತ್ರೆಗೆ ಕರದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಪ್ರಕರಣ ಸಂಬಂಧ ಸಾಗರ ಟೌನ್‌ ಪೊಲೀಸರು ಕೇಸ್‌ ಮಾಡಿದ್ದಾರೆ. 



ಸುದ್ದಿ  3 | ಎರಡು ಬಸ್‌ಗಳ ನಡುವೆ ಡಿಕ್ಕಿ

ಶಿವಮೊಗ್ಗ ಸಿಟಿ ಹೊರವಲಯ ಮಲ್ಲಿಗೇನ ಹಳ್ಳಿ ಬಳಿಯಲ್ಲಿ ಎರಡು ಬಸ್‌ಗಳ ನಡುವೆ ಡಿಕ್ಕಿಯಾಗಿದೆ. ಸಾಗರ ರೋಡ್‌ ಬೈಪಾಸ್‌ ಸೇತುವೆ ಬಳಿಯಲ್ಲಿ  ಘಟನೆ ನಡೆದಿದೆ. ಖಾಸಗಿ ರೂಟ್‌ ಬಸ್‌ ಹಾಗೂ ಕಾಲೇಜೊಂದರ ಬಸ್‌ ನಡುವೆ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸ‍ಣ್ಣಪುಟ್ಟ ಪೆಟ್ಟಾಗಿದೆ. ಇತ್ತ ಕಾಲೇಜೊಂದರ ಬಸ್‌ನಲ್ಲಿದ್ದ ವಿದ್ಯಾರ್ಥಿಗಳಿಗೂ ಗಾಯಗಳಾಗಿವೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಎರಡು ಬಸ್‌ಗಳ ಮುಂಭಾಗ ಜಖಂ ಆಗಿದೆ. 

ಸುದ್ದಿ 4 | ಆಂಬುಲೆನ್ಸ್‌ ಮಾಲೀಕರಿಗೆ ಸೂಚನೆ

ಶಿವಮೊಗ್ಗ ಸಂಚಾರ ವೃತ್ತ ಕಛೇರಿಯಲ್ಲಿ ಶಿವಮೊಗ್ಗ ನಗರದ ಎಲ್ಲಾ ಆಂಬುಲೆನ್ಸ್ ಮಾಲಿಕರ ಮತ್ತು ಚಾಲಕರ  ಸಭೆಯನ್ನು ಶಿವಮೊಗ್ಗ ಟ್ರಾಫಿಕ್‌ ಪೊಲೀಸರು ನಡೆಸಿದ್ದು, ಈ ವೇಳೆ ಆಂಬುಲೆನ್ಸ್‌ ಮಾಲೀಕರು ಹಾಗೂ ಚಾಲಕರಿಗೆ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ. ಆಂಬುಲೆನ್ಸ್ ಮಾಲೀಕರು ಕಡ್ಡಾಯವಾಗಿ ತಮ್ಮ ವಾಹನಗಳಿಗೆ ಎಲ್ಲಾ  ದಾಖಲಾತಿಗಳು  ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳುವುದು. ಆಂಬುಲೆನ್ಸ್ ನಲ್ಲಿ ಪೇಷೆಂಟ್ ಇರುವ ಸಮಯದಲ್ಲಿ ಮಾತ್ರ ಸೈರನ್ ಬಳಸುವುದು. ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. 

ಸುದ್ದಿ  5 | ನೀರಿನ ಟ್ಯಾಂಕ್‌ ಪೈಪ್‌ ಕಳ್ಳತನ

ಶಿವಮೊಗ್ಗದ ಕೆಹೆಚ್‌ಬಿ ಪ್ರೆಸ್‌ ಕಾಲೋನಿಯಲ್ಲಿ ನೀರಿನ ಟ್ಯಾಂಕ್‌ನ ಪೈಪ್‌ಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್‌ ಆಗಿದ್ದು, ಆರೋಪಿಗಳಿಬ್ಬರು ಓವರ್‌ ಟ್ಯಾಂಕ್‌ ಬಳಿ ಬಂದು ಅದಕ್ಕೆ ಅಳವಡಿಸಿ ಪೈಪ್‌ಗಳನ್ನು ಕಳವು ಮಾಡಿದ್ದಾರೆ. ಈ ಹಿಂದೆಯು ಇಲ್ಲಿ ಕಳ್ಳತನವಾಗುತ್ತಿದ್ದು, ಸ್ಥಳೀಯರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ

SUMMARY | shivamogga top 5 news

KEY WORDS |  shivamogga top 5 news