ಸವಳಂಗ ರೋಡಲ್ಲಿ ಹೊನ್ನಾಳಿ ವ್ಯಕ್ತಿಯ ಶವ ಪತ್ತೆ | ಶರಾವತಿ ನಗರದ ಬಳಿ ಆಗಿದ್ದೇನು? | ದಿನದ ಸುದ್ದಿಗಳು

shivamogga today news 

ಸವಳಂಗ ರೋಡಲ್ಲಿ ಹೊನ್ನಾಳಿ ವ್ಯಕ್ತಿಯ ಶವ ಪತ್ತೆ | ಶರಾವತಿ ನಗರದ ಬಳಿ ಆಗಿದ್ದೇನು? | ದಿನದ ಸುದ್ದಿಗಳು
shivamogga today news 

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 27, 2025 ‌‌ 

ಶಿವಮೊಗ್ಗ ಸಿಟಿ ಹೊರವಲಯದ ಸವಳಂಗ ರಸ್ತೆಯಲ್ಲಿ ವ್ಯಕ್ತಿಯೊಬ್ಬನ ಶವ ಪ್ತತೆಯಾಗಿದೆ. ಆತನ ಗುರುತು ಸಹ ಪತ್ತೆಯಾಗಿದೆ ಹೊನ್ನಾಳಿ ಮೂಲದ ಕೂಲಿಕಾರ್ಮಿಕ ಆತ ಎಂದು ಸ್ಥಳೀಯರು ಗುರುತಿಸಿದ್ದಾರೆ. ಹೆಸರು ಹಳದಪ್ಪ  35 ವರುಷ ಎಂದು ತಿಳಿದುಬಂದಿದೆ. ಇಲ್ಲಿನ ಶಾಲೆಯೊಂದರ ಸಮೀಪ ರಸ್ತೆಯ ಬದಿಯಲ್ಲಿ ಆತನ ಶವ ಪತ್ತೆಯಾಗಿದೆ.ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಕೇಸ ಮಾಡಿದ್ದಾರೆ. 

ಇನ್ನೊಂದು ಪ್ರಕರಣದಲ್ಲಿ ನಿನ್ನೆ ದಿನ ರಾತ್ರಿ ಶಿವಮೊಗ್ಗ ಸಿಟಿ ಶರಾವತಿ ನಗರ ಸಮೀಪ ವ್ಯಾಗನರ್‌ ಕಾರೊಂದು ಆಕ್ಸಿಡೆಂಟ್‌ ಆಗಿದೆ. ವಿನೋಬಗನಗರ 60 ಫೀಟಸ್‌ ರಸ್ತೆಯ ಬಳಿ ಘಟನೆ ನಡೆದಿದ್ದು, ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದೆ. ಇನ್ನೂ ಚಾಲಕನಿಗೆ ಸ್ವಲ್ಪ ಪೆಟ್ಟಾಗಿದೆ ಎಂದು ಗೊತ್ತಾಗಿದೆ. ಸ್ಪೀಡ್‌ ಜಾಸ್ತಿ ಇರುವುದು ಘಟನೆಗೆ ಕಾರಣ ಎನ್ನಲಾಗಿದ್ದು, ಪಶ್ಚಿಮ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಇತ್ತ ರಿಪ್ಪನ್‌ ಪಠೆಯ ಸಮೀಪ ಬಾಳೂರು ಗ್ರಾಮ ಪಂಚಾಯತಿ ವತಿಯಿಂದ ನಿರ್ಮಿಸಿದ ರಸ್ತೆಯನ್ನೆ ಖಾಸಗಿ ವ್ಯಕ್ತಿಯೊಬ್ಬ ಮಣ್ಣು ಹಾಕಿ ಒತ್ತುವರಿ ಮಾಡಿಕೊಂಡು ಜನರ ಓಡಾಟಕ್ಕೆ ಅಡ್ಡಿ ಮಾಡುತ್ತಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ರಿಪ್ಪನ್‌ಪೇಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಖಾಸಗಿ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ. 

SUMMARY |  shivamogga today news 

KEY WORDS |shivamogga today news