ಇದು ಟ್ರೋಲಾಗುತ್ತೆ ಅಂತಾ ಹೀಗೆ ವಿಡಿಯೋ ಮಾಡಿದ್ರೇ ಸೈಕ್‌ ಆಗುತ್ತೆ ರೂಲ್ಸ್‌ ! ಹುಷಾರ್‌ ಬಾಯ್ಸ್‌!

Shivamogga, there's been a rise in incidents of disrespect towards police officers

ಇದು ಟ್ರೋಲಾಗುತ್ತೆ ಅಂತಾ ಹೀಗೆ ವಿಡಿಯೋ ಮಾಡಿದ್ರೇ ಸೈಕ್‌ ಆಗುತ್ತೆ ರೂಲ್ಸ್‌ ! ಹುಷಾರ್‌ ಬಾಯ್ಸ್‌!

SHIVAMOGGA | MALENADUTODAY NEWS | Jul 13, 2024   

ಶಿವಮೊಗ್ಗದಲ್ಲಿ ಈಗೀಗ ಪೊಲೀಸರನ್ನ ಅವಹೇಳನ ಮಾಡುವಂತಹ ದುರ್ಬುದ್ದಿಯ ಪ್ರವೃತ್ತಿಯೊಂದು ಹೆಚ್ಚಾಗುತ್ತಿದೆ. ಸ್ಮಾರ್ಟ್‌ ಸಿಟಿ ಕ್ಯಾಮಾರಾ ಅಳವಡಿಸಿದ ಬೆನ್ನಲ್ಲೆ, ಅದೆಂಗೆ ನಮ್ಮ ಗಾಡಿ ಹಿಡಿಯುತ್ತಾರೆ ನೋಡೋಣ ಎಂದು ಬಹಿರಂಗವಾಗಿ ಸೋಶಿಯಲ್‌ ಮೀಡಿಯಾಗಳಲ್ಲಿ ಚಾಲೆಂಜ್‌ ಮಾಡಿದಂತಹ ಪ್ರಕರಣಗಳು ಬಹಳಷ್ಟು ನಡೆದಿದೆ. ಅದಕ್ಕಾಗಿ ನಕಲಿ ನಂಬರ್‌ ಪ್ಲೇಟ್‌ ಹಾಕಿಕೊಂಡು ಓಡಾಡುತ್ತಿರುವ ವಾಹನಗಳನ್ನ ಪೊಲೀಸರು ಹಿಡಿದು ಸ್ಟೆಷನ್‌ಗಳಲ್ಲಿ ಇಡುತ್ತಿದ್ದಾರೆ. 

ಇನ್ನೊಂದು ಕಡೆ ಸಿನಿಮಾಗಳಲ್ಲಿ ಬರುವ ಪೊಲೀಸರ ವಿರುದ್ಧದ ಡೈಲಾಗ್‌ಗಳನ್ನ ಬಳಸಿಕೊಂಡು ರೀಲ್ಸ್‌ ಮಾಡಿ ಪೋಸ್‌ ಕೊಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಲೇಟೆಸ್ಟ್‌ ಸಾಕ್ಷಿಯೊಂದು ಸಿಕ್ಕಿದ್ದು, ಈ ಸಂಬಂಧ ತುಂಗಾನಗರ ಪೊಲೀಸ್‌ ಸ್ಟೇಷನ್‌ನಲ್ಲಿ ಆರ್ಮ್ಸ್‌ ಆಕ್ಟ್‌ ಅಡಿಯಲ್ಲಿ ಕೇಸ್‌ ಸಹ ದಾಖಲಾಗಿದೆ. 

ದರ್ಶನ್‌ ಕೇಸ್‌ಗೂ 4 ತಿಂಗಳ ಹಿಂದೆ ನಡೆದಿದ್ದ ಗಾಡಿಕೊಪ್ಪ ಯುವಕನ ಶೆಡ್‌ ಕೇಸ್‌ ಸತ್ಯ ಬಯಲು! ಚಾರ್ಜ್‌ಶೀಟ್‌

ಪ್ರಕರಣದಲ್ಲಿ ಕೆಲವು ಅಪ್ರಾಪ್ತರು ಇರುವ ಕಾರಣಕ್ಕೆ ವೈಯಕ್ತಿಕ ವಿವರ ನೀಡಲಾಗುವುದಿಲ್ಲ ದಾಖಲಾಗಿರುವ ಎಫ್‌ಐಆರ್‌ ಪ್ರಕಾರ, ARMS ACT, 1959 (U/s-25-1(B) (b)) ನಡಿಯಲ್ಲಿ ಸ್ಟೆಷನ್‌ ಒಂದರ ಎಸ್‌ಐ 2 ರವರು ಸುಮುಟೋ ಕೇಸ್‌ ದಾಖಲಿಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ 27 ಸೆಕೆಂಡ್‌ ವಿಡಿಯೋ ಎಸ್‌ಐ ರವರಿಗೆ ತಲುಪಿದೆ. ಅದನ್ನ ಕೂಲಂಕುಶವಾಗಿ ಪರಿಶೀಲಿಸಿದ ಅವರಿಗೆ ಅದರಲ್ಲಿ ಪ್ರಚೋಧನಕಾರಿ ಹೇಳಿಕೆ ಹಾಗೂ ಮಾರಕಾಸ್ತ್ರಗಳನ್ನ ಹಿಡಿದಿರುವ ದೃಶ್ಯ ಕಂಡಿದೆ. ಈ ಹಿನ್ನೆಲೆಯಲ್ಲಿ ಈ ಕೇಸ್‌ ದಾಖಲಾಗಿದೆ. 

ಸಿನಿಮಾವೊಂದರಲ್ಲಿ ಮೈ ಮೇಲೆ ಖಾಕಿ ಕೈ ಗೆ ತೂಪಾಕಿ ಬಂದ ಮೇಲೆನೇ ಈ ನನ್ನ ಮಕ್ಕಳು ಗಂಡಸ್ಸು ಅಂತ ಅನಿಸಿಕೊಂಡಿರುವುದು, ಆದರೆ ನಮ್ಮ ಅಪ್ಪ ಅಮ್ಮ ನನ್ನ ಹುಟ್ಟೂವಾಗಲೇ ಗಂಡು ಅಂತ ಹುಟ್ಟಿಸಿದಾರೆ ಎನ್ನುವ ಡೈಲಾಗ್‌ ಇದೆ. ಹೀಗೆ ಮುಂದುವರಿದು ಈ ನನ್ನ ಮಗ ಅದೇನ್ ಕೀತಕೋತ್ತನೋ ನೋಡೆಬಿಡೋಣ ಬನ್ ರೋ ಎನ್ನುವ ಸಂಭಾಷಣೆಯನ್ನ ಬಳಸಿಕೊಂಡು ಆರೋಪಿಗಳು ವಿಡಿಯೋ ಮಾಡಿದ್ದಾರೆ. ಹಾಗೆ ವಿಡಿಯೋ ಮಾಡಿದ್ದರೇ ಸಮಸ್ಯೆ ಇಷ್ಟೊಂದು ದೊಡ್ಡ ಮಟ್ಟಕ್ಕಾಗುತ್ತಿರಲಿಲ್ಲ. ಆದರೆ ಕೈಯಲ್ಲಿ ಲಾಂಗು ಹಾಗೂ ಚಾಕುಗಳನ್ನ ಹಿಡಿದು ವಿಡಿಯೋ ಮಾಡಿದ್ದರು. ಹೀಗಾಗಿ ಎಸ್‌ಐರವರು ವಿಡಿಯೋ ನೋಡಿ ಸುಮೊಟೋ ಕೇಸ್‌ ದಾಖಲಿಸಿ ಆರು ಮಂದಿ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಕೆಲವರನ್ನ ವಶಕ್ಕೂ ಪಡೆದು ಪಾಠ ಮಾಡಿದ್ದಾರೆ ಎಂದು ಗೊತ್ತಾಗಿದೆ. 

ಟ್ರೋಲ್‌ ಆಗುತ್ತೆ ಅಂತಾ ವಿಡಿಯೋ ಮಾಡೋ ಹುಚ್ಚಾಟ ಜಾಸ್ತಿಯಾಗಿದೆ. ತಮ್ಮನ್ನ ಸೈಕೋ ಎಂಬಂತೆ ಐಡೆಂಟೆಟಿ ತೋರಿಸುವ ಹುಚ್ಚುತನದ ಪ್ರವೃತ್ತಿ ಹೆಚ್ಚಾಗುತ್ತಿದೆ. ಹಾಗೆ ಮಾಡಿದರೆ ಕಾನೂನು ಶಿಕ್ಷೆಯನ್ನ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಈ ಕೇಸ್‌ ಸಾಕ್ಷಿಯಾಗಿದೆ. ಈ ಕೇಸ್‌ ನೋಡಿ ಎಚ್ಚೆತ್ತುಕೊಳ್ಳಲಿ ಎಂಬ ಕಾರಣ ಈ ವರದ್ದಿಯಾಗಿದೆ. 

Shivamogga, there's been a rise in incidents of disrespect towards police officers