ಶಿವಮೊಗ್ಗದಲ್ಲಿ ಮೈಸೂರು ದಸರಾ ಎಕ್ಸಿಬೀಷನ್ | ಆ ವಿಡಿಯೋ ಈಗಿಂದಲ್ಲ ಎಂದ KSRTC | ಮಹಿಳೆ ಬಾ ಎಂದವ ಏನಾದ | ಥರ ಥರ ಸುದ್ದಿ

shivamogga thara thara suddi,

ಶಿವಮೊಗ್ಗದಲ್ಲಿ ಮೈಸೂರು ದಸರಾ ಎಕ್ಸಿಬೀಷನ್ | ಆ ವಿಡಿಯೋ ಈಗಿಂದಲ್ಲ ಎಂದ KSRTC | ಮಹಿಳೆ ಬಾ ಎಂದವ ಏನಾದ | ಥರ ಥರ ಸುದ್ದಿ
shivamogga thara thara suddi,

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 23, 2025 ‌‌ 

ಶಿವಮೊಗ್ಗದಲ್ಲಿಯು ನಡೆಯಲಿದೆ ದಸರಾ ಎಕ್ಸಿಬೀಷನ್‌! 

ಮೈಸೂರು ದಸರಾ ಸಂದರ್ಭದಲ್ಲಿ ನಡೆಯುತ್ತಿದ್ದ ದಸರಾ ವಸ್ತು ಪ್ರದರ್ಶನ ಇನ್ಮುಂದೆ ವರುಷ ಪೂರ್ತಿ ನಡೆಯಲಿದ್ದು, ಶಿವಮೊಗ್ಗವೂ ಸೇರಿದಂತೆ ದಾವಣಗೆರೆ,  ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ವಸ್ತು ಪ್ರದರ್ಶನ ಆಯೋಜಿಸಲು ನಿರ್ಧರಿಸಲಾಗುತ್ತಿದೆ. ನಿನ್ನೆ ದಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ (ಕೆಇಎ) ಅಧ್ಯಕ್ಷ ಅಯೂಬ್ ಖಾನ್ ರವರು ಈ ವಿಷಯವನ್ನು ತಿಳಿಸಿದ್ದಾರೆ.

ಹಳೆ ವಿಡಿಯೋ ಬಗ್ಗೆ ಕೆಎಸ್‌ಆರ್‌ಟಿಸಿ ಸ್ಪಷ್ಟನೆ

ಬೆಳಗಾವಿ ಪ್ರಕರಣದ ಬೆನ್ನಲ್ಲೆ ಸೋಶಿಯಲ್‌ ಮೀಡಿಯಾಗಳಲ್ಲಿ ಬಸ್‌ನಿಂದ ಪ್ರಯಾಣಿಕನನ್ನು ಒದೆಯುವ ವಿಡಿಯೋ ಹರಿದಾಡುತ್ತಿದ್ದು, ಇದನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಹೀಗಾಗಿ ಈ ರೀತಿಯ ವಿಡಿಯೋಗಳನ್ನು ನಂಬಬೇಡಿ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸದರಿ ವೀಡಿಯೋ ತುಣುಕು ಎರಡುವರೆ ವರುಷಗಳ ಹಿಂದಿನದಾಗಿದ್ದು, ಈ ಘಟನೆಯು ದಿನಾಂಕ 07-09-2022 ರ ಸಂಜೆ ವಾಹನ ಸಂಖ್ಯೆ ಎಫ್ 0002 ಅನುಸೂಚಿ ಸಂಖ್ಯೆ 159/160 ರಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ ಸುಖರಾಜ ರೈ ಬಿಲ್ಲೆ ಸಂಖ್ಯೆ. 2994 ಇವರು ಪುತ್ತೂರು ತಾಲೂಕಿನ ಈಶ್ವರ ಮಂಗಲದಲ್ಲಿ ಓರ್ವ ಮಧ್ಯಪಾನ ಮಾಡಿದ ಪ್ರಯಾಣಿಕರನ್ನು ವಾಹನದಿಂದ ಕೆಳಗಡೆಗೆ ಇಳಿಸುವಾಗ ಅಮಾನವೀಯವಾಗಿ ವರ್ತಿಸಿ, ಅವರಿಗೆ ಹೊಡೆದು ಕಾಲಿನಿಂದ ಒದ್ದು ಬೀಳಿಸಿರುತ್ತಾರೆ. ನಿರ್ವಾಹಕರ ಈ ರೀತಿಯ ವರ್ತನೆಗೆ ಸಂಸ್ಥೆಯು ಕಠಿಣ ಶಿಸ್ತಿನ ಕ್ರಮ ತೆಗೆದುಕೊಂಡು ಅಮಾನತ್ತು ಶಿಕ್ಷೆಯನ್ನು ಸಹ ವಿಧಿಸಲಾಗಿರುತ್ತದೆ. ನಿಗಮವು ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿ, ಇತರೆ ಸಿಬ್ಬಂದಿಗಳಿಗೆ ಪ್ರಯಾಣಿಕರೊಡನೆ ಸೌಹಾರ್ದತೆಯಿಂದ ವರ್ತಿಸುವಂತೆ ಎಚ್ಚರಿಕೆ ನೀಡಲಾಗಿತ್ತು. ಎಂದು ಹರಿದಾಡುತ್ತಿರುವ ಈ ವಿಡಿಯೋದ ಬಗ್ಗೆ ಸ್ಪಷ್ಟನೆ ನೀಡಿದೆ. 

ಮಹಿಳೆಗೆ ಕರೆದ ವ್ಯಕ್ತಿ ಪೊಲೀಸ್‌ ವಶಕ್ಕೆ 

ಶಿವಮೊಗ್ಗ ಬಸ್‌ ನಿಲ್ದಾಣದ ಬಳಿಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದೆ. ಬೈಕ್‌ ತರಲು ಹೋಗಿದ್ದ ಪತಿಗಾಗಿ ಕಾಯುತ್ತಿದ್ದ ಮಹಿಳೆಯ ಬಳಿ ವ್ಯಕ್ತಿಯೊಬ್ಬರ ರೇಟು ಎಷ್ಟು ಎಂದು ಕೇಳಿದ್ದ ಎಂದು ದೂರಲಾಗಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ಆತನನ್ನು ಹಿಡಿದು ತರಾಟೆ ತೆಗೆದುಕೊಂಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ದೊಡ್ಡಪೇಟೆ ಪೊಲೀಸರು ಸಂಬಂಧಿತ ವ್ಯಕ್ತಿಯನ್ನು ತಮ್ಮ ವಶಕ್ಕೆ ಪಡೆದು ಅಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಡಿಸಿದರು.

SUMMARY | shivamogga thara thara suddi, 

KEY WORDS | shivamogga thara thara suddi,