ಸಿಂಗಳೀಕ ಫಾರೆಸ್ಟ್‌ನಲ್ಲಿ ಹುಲಿಯ ಆರ್ಭಟ | ಬ್ಯಾಂಕ್ ಲಾಕರ್‌ನಿಂದಲೇ ಚಿನ್ನ ಮಾಯ | ಅವರನ್ನ ಬಿಟ್ಟು ಇವನನ್ನ ಹಿಡಿದ್ರಾ ಪೊಲೀಸ್! | ಥರ ಥರ ಸುದ್ದಿ
shivamogga tara tara suddi

SHIVAMOGGA| MALENADUTODAY NEWS | ಮಲೆನಾಡು ಟುಡೆ Mar 4, 2025
ಸುದ್ದಿ 1 : ಚಂದ್ರಗುತ್ತಿ ಹಣ ಎಣಿಕೆ | ಶಿವಮೊಗ್ಗದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸೊರಬ ತಾಲ್ಲೂಕು ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದ ಕಾಣಿಕೆ ಹುಂಡಿ ಹಣ ಎಣಿಕೆ ಮುಗಿದಿದ್ದು, ಈ ಬಾರಿ ದೇವಸ್ಥಾನದ ಹುಂಡಿಯಲ್ಲಿ 35,07,240 ರೂಪಾಯಿ ಸಂಗ್ರಹವಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಕಾಣಿಕೆ ಹಣ 43,15,460 ರೂಪಾಯಿ ಸಂಗ್ರಹವಾಗಿತ್ತು. ಹುಂಡಿ ಹಣ ಎಣಿಕೆ ಹಿನ್ನೆಲೆಯಲ್ಲಿ ಸಿಸಿ ಕ್ಯಾಮಾರವೂ ಸೇರಿದಂತೆ ಅಗತ್ಯ ಭದ್ರತೆಯನ್ನು ಕೈಗೊಳ್ಳಲಾಗಿತ್ತು.
ಸುದ್ದಿ 2: ಇಸ್ಪೀಟ್ ಅಡ್ಡೆ ಮೇಲೆ ರೇಡ್, ತೋಟದಲ್ಲಿ ಕೆಲಸ ಮಾಡ್ತಿದ್ದವನನ್ನ ಹಿಡಿದ ಪೊಲೀಸ್ | ಇಸ್ಪೀಟ್ ಅಡ್ಡೆ ಮೇಲೆ ರೇಡ್ ಮಾಡಿದ ಸಂದರ್ಭದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಪೊಲೀಸರು ಕರೆದೊಯ್ದು ಅರೆಸ್ಟ್ ಪ್ರಕ್ರಿಯೆ ಕೈಗೊಂಡ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣೆಯ ಲಿಮಿಟ್ಸ್‌ನಲ್ಲಿ ನಡೆದಿದೆ. ಈ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರು ತಮ್ಮ ಗ್ರಾಮದ ಯುವಕನನ್ನು ಕರೆದೊಯ್ದಿದ್ದಕ್ಕೆ ಠಾಣೆಗೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದರಷ್ಟೆ ಅಲ್ಲದೆ ತಮ್ಮ ಗ್ರಾಮದ ಯುವಕನನ್ನು ಠಾಣೆಯಿಂದ ಬಿಡಿಸಿಕೊಂಡು ತೆರಳಿದರು. ಮೇಲಾಗಿ ಅಮಾಯಕನಿಗೆ ಪೊಲೀಸ್ ಕಿರುಕುಳ ನೀಡಿದ್ದಾರೆಂದು ಆರೋಪಿ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದರು.
ಸುದ್ದಿ 3 : ಬ್ಯಾಂಕ್ ಲಾಕರ್‌ನಲ್ಲಿದ್ದ ಚಿನ್ನವೇ ಮಾಯ | ಬೆಂಗಳೂರು ಜಯನಗರ 8 ಬ್ಲ್ಯಾಕ್‌ನ ಬ್ಯಾಂಕ್‌ವೊಂದರಲ್ಲಿ ಲಾಕರ್‌ನಲ್ಲಿ ಸೇಫ್ ಆಗಿರಲಿ ಎಂದು ಇಟ್ಟಿದ್ದ ಸುಮಾರು 32 ಲಕ್ಷ ರೂಪಾಯಿ ಮೌಲ್ಯದ ಚಿನ್ನವೇ ಮಾಯವಾಗಿರುವ ಬಗ್ಗೆ ಗ್ರಾಹಕರೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ದೂರು ಕೊಟ್ಟಿರುವ ಅವರು ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಪರಿಶೀಲಿಸಿದ ಸಂದರ್ಭದಲ್ಲಿ ಲಾಕರ್‌ನಲ್ಲಿ ಚಿನ್ನ ಉಳಿದಿತ್ತು. ಆನಂತರ ಪರಿಶೀಲಿಸಿದಾಗ ಅದರಲ್ಲಿ ನಕಲಿ ಚಿನ್ನವಿರುವುದು ಗೊತ್ತಾಗಿದೆ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸುದ್ದಿ 4: ಸಿಂಗಳೀಕ ಅಭಯಾರಣ್ಯದಲ್ಲಿ ಹುಲಿ ಪ್ರತ್ಯಕ್ಷ : ಶರಾವತಿ ಸಿಂಗಳೀಕ ವನ್ಯಜೀವಿ ಅಭಯಾರಣ್ಯದಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ವನ್ಯಜೀವಿಗಳಿಗಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳಿಗೆ ಅನುಕೂಲವಾಗುತ್ತಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಹುಲಿಯೊಂದು ಇಲ್ಲಿನ ಅರಣ್ಯ ಇಲಾಖೆ ನಿರ್ಮಿಸಿರುವ ಕಟ್ಟೆಯಲ್ಲಿ ನೀರು ಕುಡಿದು ಮುಂದಕ್ಕೆ ಸಾಗಿದೆ. ಈ ದೃಶ್ಯ ಅರಣ್ಯ ಇಲಾಖೆ ಇಟ್ಟಿರುವ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ವಿಶ್ವ ವನ್ಯಜೀವಿ ದಿನದ ಅಂಗವಾಗಿ ಶರಾವತಿ ಸಿಂಗಳೀಕ ವನ್ಯಜೀವಿ ಅಭಯಾರಣ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಕುರಿತು ಮಾಹಿತಿ ನೀಡುವ ವೇಳೆ ಅಧಿಕಾರಿಗಳು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.