ಅತಿಯಾಯ್ತು ದನಗಳ್ಳರ ಹಾವಳಿ | ಸಾಕ್ಷಿ ಇದ್ದರೂ ಸಿಗುತ್ತಿಲ್ಲವಾ ಮಂಕಿಕ್ಯಾಪ್ ಗೋಕಳ್ಳರು!
shivamogga soraba cow smuggling , ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕ, ದನ ಕಳ್ಳತನ, ಗೋಕಳ್ಳರು, ಪಾರ್ಚೂನರ್ ಕಾರು
SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 30, 2024 | ಐಶಾರಾಮಿ ವಾಹನದಲ್ಲಿ ಬಂದು ಮನೆಮುಂದೆಯ ದನ ಕಳವು ಮಾಡಿಕೊಂಡು ಹೋಗುತ್ತಿದ್ದಾರೆ. ಘಟನೆಯ ಸಿಸಿ ಕ್ಯಾಮರಾ ದೃಶ್ಯಗಳಿದ್ದರೂ ಹಸುಗಳು ವಾಪಸ್ ಸಿಗುತ್ತಿಲ್ಲ, ಕಳ್ಳರೂ ಸಹ ಪತ್ತೆಯಾಗುತ್ತಿಲ್ಲ ಎಂಬ ಆರೋಪವೊಂದು ಸೊರಬದಲ್ಲಿ ಕೇಳಿಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ನಡೆದ ಘಟನೆಯ ಸಿಸಿ ಕ್ಯಾಮರಾದ ದೃಶ್ಯಗಳು ವೈರಲ್ ಆಗಿವೆ.
ಸುಮಾರು ಐದು ಮಂದಿ ಇದ್ದ ತಂಡವೊಂದು ಸೊರಬದ ಚಿಕ್ಕಪೇಟೆಯಲ್ಲಿ ಇಂತಹದ್ದೊಂದು ಕೃತ್ಯ ನಡೆಸಿದ್ದಾರೆ. ಮಂಕಿ ಕ್ಯಾಪ್ ಹಾಕಿಕೊಂಡು ಬಂದ ಕಳ್ಳರು, ಈ ಭಾಗದಲ್ಲಿ ಓಡಾಡಿಕೊಂಡಿದ್ದ ಹಸುವೊಂದನ್ನ ಅನಾಮತ್ತಾಗಿ ಪಾರ್ಚುನರ್ ಕಾರಿಗೆ ಹಾಕಿಕೊಂಡು ಅಲ್ಲಿಂದ ತೆರಳುತ್ತಾರೆ.
ಇದನ್ನ ಗಮನಿಸಿ ಸ್ಥಳೀಯರು ಓಡಿ ಬಂದು ಕಾರು ಅಡ್ಡಹಾಕುವಷ್ಟರಲ್ಲಿ ಆರೋಪಿಗಳು ಎಸ್ಕೇಪ್ ಆಗುತ್ತಾರೆ. ಸ್ಥಳೀಯರು ಹೇಳುವಂತೆ ಗಾಡಿನಂಬರ್ ಸಮೇತ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆರೋಪಿಗಳು ಮಾತ್ರ ಸಿಕ್ಕಿಲ್ಲ