SAGARA NEWS | ತಾಮ್ರದ ಹಂಡೆ ಕದ್ದವನ ಬಳಿ ಸಿಕ್ತು ಚಾಲಿ ಅಡಿಕೆ | @ಕರಡಿ ಸೇರಿ ಇಬ್ಬರ ಅರೆಸ್ಟ್‌

shivamogga, sagara rural police station case , ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆ, ಸಾಗರ ಪೊಲೀಸರು, ಅಡಿಕೆ ಕಳ್ಳತನ ಪ್ರಕರಣ, ಸಾಗರ ಟೌನ್‌ ಪೊಲೀಸ್‌ ಠಾಣೆ ಕೇಸ್‌

SAGARA NEWS  | ತಾಮ್ರದ ಹಂಡೆ ಕದ್ದವನ ಬಳಿ ಸಿಕ್ತು  ಚಾಲಿ ಅಡಿಕೆ | @ಕರಡಿ ಸೇರಿ ಇಬ್ಬರ ಅರೆಸ್ಟ್‌
shivamogga, sagara rural police station case , ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆ, ಸಾಗರ ಪೊಲೀಸರು, ಅಡಿಕೆ ಕಳ್ಳತನ ಪ್ರಕರಣ, ಸಾಗರ ಟೌನ್‌ ಪೊಲೀಸ್‌ ಠಾಣೆ ಕೇಸ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ 

Sep 27, 2024  SAGARA NEWS | ಶಿವಮೊಗ್ಗ ಜಿಲ್ಲೆ ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆ ಪೊಲೀಸರು ಪ್ರಕರಣವೊಂದನ್ನ ಬೇಧಿಸಿದ್ದು, ಆ ಪ್ರಕರಣದ ತನಿಖೆ ವೇಳೆ ಇನ್ನೆರಡು ಪ್ರಕರಣಗಳು ಇತ್ಯರ್ಥ ಕಂಡಿವೆ. 

ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ದಿನಾಂಕಃ 03-07-2024 ರಂದು ಬೇದೂರು ಗ್ರಾಮದ ನಿವಾಸಿಯೊಬ್ಬರು ತಮ್ಮ ಮನೆಯ ಪಕ್ಕದ ಶೆಡ್ ನಲ್ಲಿ ಇಟ್ಟಿದ್ದ  ಮರ ಕತ್ತರಿಸುವ ಯಂತ್ರ, ತಾಮ್ರದ ಹಂಡೆ ಕಳುವಾಗಿರುವ ಬಗ್ಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ  ಸಾಗರ ಗ್ರಾಮಾಂತರ ಪೊಲೀಸರು  1) ನಾಗರಾಜ @ ಕರಡಿ, 24 ವರ್ಷ, ನೆಹರೂ ನಗರ ಸಾಗರ ಟೌನ್ ಮತ್ತು 2) ರಾಘವೇಂದ್ರ @ ರೊಡ್ಡಿ, 22 ವರ್ಷ, ಎಸ್. ಎನ್ ನಗರ ಸಾಗರ ಟೌನ್  ಇಬ್ಬರನ್ನ ಬಂಧಿಸಿದ್ದಾರೆ. 

ಈ ಪ್ರಕರಣದಲ್ಲಿ ಅರೆಸ್ಟ್‌ ಆದ ಇಬ್ಬರನ್ನ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಸಾಗರ ಟೌನ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆಸಿದ ಎರಡು ಅಡಿಕೆ ಕಳ್ಳತನ ಪ್ರಕರಣವನ್ನ ಬಾಯ್ಬಿಟ್ಟಿದ್ದಾರೆ. 

 

ಸದ್ಯ ಮೂರು ಪ್ರಕರಣಗಳಿಗೆ ಸಂಬಂಧಿಸಿದ 1) ಅಂದಾಜು ಮೌಲ್ಯ 18,000/- ರೂಗಳ ಮರ ಕತ್ತರಿಸುವ ಯಂತ್ರ, 2) ಅಂದಾಜು ಮೌಲ್ಯ 1,05,000/-  ರೂಗಳ ಚಾಲಿ ಅಡಿಕೆ, 3) ಅಂದಾಜು ಮೌಲ್ಯ 1,00,000/-  ರೂಗಳ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ, 4)  ಅಂದಾಜು ಮೌಲ್ಯ 10,000/-  ರೂಗಳ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನ ಸೇರಿ ಒಟ್ಟು 2,33,000/-  ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.