ಮದುವೆಗೆ 15 ದಿನಗಳು ಬಾಕಿ ಇರುವಾಗ ರಸ್ತೆ ಅಪಘಾತ, ಯುವತಿ ಸಾವು

prathapa thirthahalli
Prathapa thirthahalli - content producer

Shivamogga road accident :ಶಿವಮೊಗ್ಗ: ಮದುವೆಗೆ ಕೇವಲ 15 ದಿನಗಳು ಬಾಕಿ ಇದ್ದಾಗಲೇ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿರುವ ದುರಂತ ಘಟನೆ ಶಿವಮೊಗ್ಗದಲ್ಲಿ  ಇಂದು ಬೆಳಿಗ್ಗೆ ನಡೆದಿದೆ.  ಈ ಘಟನೆಯಲ್ಲಿ ಮೃತ ಯುವತಿಯನ್ನು 26 ವರ್ಷದ ಕವಿತಾ ಎಂದು ಗುರುತಿಸಲಾಗಿದೆ.

ಕವಿತಾ  ದುಮ್ಮಳ್ಳಿಯಿಂದ ತನ್ನ ಸಹೋದರ ಸಂತೋಷ್ ಜೊತೆ ಬೈಕ್‌ನಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದರು, ಈ ವೇಳೆ  ಮಲವಗೊಪ್ಪದ ಬಳಿ ಇರುವ ಸಕ್ಕರೆ ಕಾರ್ಖಾನೆ ಮತ್ತು ಹಾಥಿನಗರದ ನಡುವೆ (ರಾಂಗ್ ರೂಟ್‌ನಲ್ಲಿ) ಬೋಟಿ ಮಾರಾಟ ಮಾಡುವ ವಾಹನ ಅಡ್ಡಬಂದಿದ್ದು. ಆ ವಾಹನಕ್ಕೆ  ಸಂತೋಷ್​ ಡಿಕ್ಕಿ ಹೊಡೆದಿದ್ದಾರೆ. ಇ ಹಿನ್ನೆಲೆ  ಬೈಕ್​ ನೆಲಕ್ಕುರುಳಿದ್ದು ಸಂತೋಷ್ ರಸ್ತೆಯ ಫುಟ್‌ಪಾತ್ ಕಡೆ ಬಿದ್ದಿದ್ದರೆ, ಕವಿತಾ ರಸ್ತೆಯ ಮಧ್ಯೆ ಬಿದ್ದಿದ್ದಾರೆ. ಇದೇ ಸಮಯದಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ ಕವಿತಾಳ ತಲೆ ಮೇಲೆ ಹರಿದಿದ್ದು, ಆಕೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. 

Shivamogga road accident

Share This Article