ಇದುವರೆಗೂ ಸಿಕ್ಕಿಲ್ಲ ಈತನ ಸುಳಿವು | ಈತನ ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸಿ
shivamogga police announcement
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 10, 2025
ಶಿವಮೊಗ್ಗದ ಜೆಸಿ ನಗರ ಬಡಾವಣೆಯಲ್ಲಿ ಕಾಣೆಯಾದ ವ್ಯಕ್ತಿಯ ಬಗ್ಗೆ ಪೊಲೀಸ್ ಇಲಾಖೆ ಪ್ರಕಟಣೆಯನ್ನು ನೀಡಿದೆ. ಪ್ರಕಟಣೆಯ ವಿವರ ಹೀಗಿದೆ.
ನಗರದ ಜೆ.ಸಿ. ನಗರ ಬಡಾವಣೆಯ ಪರಮೇಶ್ವರ ಬಿನ್ ಗುಳ್ಯಪ್ಪ (41) ವರ್ಷ ವ್ಯಕ್ತಿಯು ದಿ: 10-07-2024 ರಂದು ಕೆಲಸಕ್ಕೆ ಹೋಗುತ್ತೇನೆಂದು ಹೋದವರು ಮನೆಗೆ ವಾಪಸ್ ಬಂದಿರುವುದಿಲ್ಲ. ಕಾಣೆಯಾದ ವ್ಯಕ್ತಿ ಸುಮಾರು 5.8 ಅಡಿ ಎತ್ತರ, ಢೃಡವಾದ ಮೈಕಟ್ಟು, ಎಣ್ಣೆಗೆಂಪು ಬಣ್ಣ, ದುಂಡು ಮುಖ, ಕಪ್ಪು ತಲೆ ಕೂದಲು, ಬಲ ತೋಳಿನ ಮೇಲೆ ಆಂಜನೇಯನ ಹಚ್ಚೆ ಗುರುತು ಹೊಂದಿರುತ್ತಾರೆ. ಬಿಳಿ ಕಪ್ಪು ಬಣ್ಣದ ಚಕ್ಸ್ ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕನ್ನಡ ಮಾತನಾಡುತ್ತಾರೆ. ಈತನ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ದೊಡ್ಡಪೇಟೆ ಪೊಲಿಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
SUMMARY | shivamogga police announcement
KEY WORDS | shivamogga police announcement