ಶಿವಮೊಗ್ಗ ನಗರದ ಕಾಶಿಪುರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 28 ವರುಷದ ಮಹಿಳೆಯ ಶವ ಪತ್ತೆ!

Malenadu Today

ಶಿವಮೊಗ್ಗ ನಗರ ದಲ್ಲಿ 28 ವರ್ಷದ ಗೃಹಿಣಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಿನ್ನೆ ದಿನ ಘಟನೆ ಬೆಳಕಿಗೆ ಬಂದಿದೆ. 

ಶಿವಮೊಗ್ಗ ವಿನೋಬನಗರ ಪೊಲೀಸ್​ ಠಾಣೆಯ ಲಿಮಿಟ್ಸ್​ನಲ್ಲಿ ಬರುವ ಕಾಶಿಪುರದಲ್ಲಿ ಘಟನೆ ವರದಿಯಾಗಿದೆ. ಇಲ್ಲಿನ ನಿವಾಸಿ 28 ವರ್ಷದ ಸ್ವಾತಿ ಎಂಬವರ ಮೃತದೇಹ ಅವರ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 

- Advertisement -

ಶಿವಮೊಗ್ಗ ನಗರ ದಲ್ಲಿ

ಎಂದಿನಿಂತೆ ಮನೆ ಬಾಗಿಲು ತೆರೆಯದೇ ಇದ್ದುದ್ದನ್ನ ಕಂಡು ಸ್ಥಳಿಯರು ಅನುಮಾನಗೊಂಡು, ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು, ಆನಂತರ  ಮನೆಯ ಇಂಟರ್ ಲಾಕ್ ಒಡೆದು ನೋಡಿದಾಗ ಮಹಿಳೆಯ ಮೃತದೇಹ ಪತ್ತೆಯಾಗಿದೆ.  

ಯುವತಿ  ಎರಡು ವರ್ಷಗಳ ಹಿಂದಷ್ಟೇ ವಿವಾಹ ವಾಗಿದ್ದರು. ಈ ದಂಪತಿಗೆ ಒಂದು ವರುಷ ಹೆಣ್ಣು ಮಗುವಿದೆ. ಘಟನೆಗೆ ದಾಂಪತ್ಯ ಕಲಹ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಈ ಸಂಬಂಧ ಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 

ಈ ಸಂಬಂಧ ಕೇಸ್​ ದಾಖಲಿಸಿರುವ ಪೊಲೀಸರು, ವಿವಿಧ ಆಯಾಮಗಳಲ್ಲಿ ಸ್ವಾತಿ ಸಾವಿನ ಪ್ರಕರಣದ ತನಿಖೆ ಆರಂಭಿಸಿದ್ದಾರೆ. 

Share This Article
Leave a Comment

Leave a Reply

Your email address will not be published. Required fields are marked *