ಲಾರಿಯಲ್ಲಿ ಅಡಿಕೆ ಸಾಗಿಸಲು ನಿರ್ಬಂಧ ‌‌& GST ಪ್ರಾಬ್ಲಮ್‌ | ಸಚಿವ ಮಧು ಬಂಗಾರಪ್ಪರ ಮಹತ್ವದ ಹೇಳಿಕೆ !

shivamogga minister madhu bangarppa , arecanut gst problem 

ಲಾರಿಯಲ್ಲಿ ಅಡಿಕೆ ಸಾಗಿಸಲು ನಿರ್ಬಂಧ ‌‌& GST ಪ್ರಾಬ್ಲಮ್‌ | ಸಚಿವ ಮಧು ಬಂಗಾರಪ್ಪರ ಮಹತ್ವದ ಹೇಳಿಕೆ !
shivamogga minister madhu bangarppa , arecanut gst problem 

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 22, 2025 ‌‌ 

ಅಡಿಕೆ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಸಾಗಿಸುವ ಸಂದರ್ಭದಲ್ಲಿ ಸಿಕ್ಕಾಪಟ್ಟೆ ಜಿಎಸ್‌ಟಿ ವಿಧಿಸುತ್ತಿರುವುದಕ್ಕೆ ಸಚಿವ ಮಧು ಬಂಗಾರಪ್ಪ ಸಿಟ್ಟಾಗಿದ್ದಾರೆ. ಈ ಸಂಬಂಧ ಅಡಿಕೆ ಭತ್ತ ಮತ್ತಿತರ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ನಿರ್ಬಂಧ ವಿಧಿಸುತ್ತಿರುವುದನ್ನು ನಿಯಂತ್ರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಜಿಲ್ಲೆಯ ಸಣ್ಣ, ಅತಿಸಣ್ಣ ರೈತರು ಹಾಗೂ ತೋಟಗಾರಿಕೆ ಬೆಳೆಗಾರರು ಬೆಳೆದ ಅಡಿಕೆ, ಭತ್ತ ಮತ್ತಿತರರ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಅನಗತ್ಯ ನಿರ್ಬಂಧ ವಿಧಿಸುತ್ತಿರುವುದು ಸರಿಯಲ್ಲ. ಜೊತೆಗೆ ಭಾರೀ ಪ್ರಮಾಣದ ತೆರಿಗೆ ವಿಧಿಸುತ್ತಿರುವುದು ಸರಿಯಲ್ಲ. ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ರೈತರ ಹಿತ ಕಾಯುವಲ್ಲಿ ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,  ಈ ಸಮಸ್ಯೆಯಿಂದ ಪಾರಾಗಲು ರೈತರಿಗೆ ಇರಬಹುದಾದ ಸಾಧ್ಯತೆಗಳ ಬಗ್ಗೆ ಪ್ರಥಮ ಹಂತದ ಮಾಹಿತಿ ಕಾರ್ಯಾಗಾರಗಳನ್ನು ಆಯೋಜಿಸುವಂತೆ ಸಚಿವರು ಸೂಚಿಸಿದರು.

ಅಲ್ಲದೆ ಜಿಲ್ಲೆಯಲ್ಲಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಹಾಗೂ ಗ್ರಾಮದ ನಿವಾಸಿಗಳಿಗೆ ಮೊಬೈಲ್ ಸಂಪರ್ಕ ಸೌಲಭ್ಯ ಕಲ್ಪಿಸಿಕೊಡಲು ನಿರ್ಮಿಸಲಾಗುತ್ತಿರುವ ಟವರ್ ಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ಈ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳ ಪರಿಹಾರಕ್ಕಾಗಿ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯತೆ ಇಟ್ಟುಕೊಳ್ಳುವಂತೆ ಅವರು ಸಲಹೆ ನೀಡಿದರು.

SUMMARY | shivamogga minister madhu bangarppa and arecanut gst problem 



KEY WORDS |‌   shivamogga minister madhu bangarppa , arecanut gst problem