ಹೊಸನಗರ ಪೆಟ್ರೋಲ್‌ ಬಂಕ್‌ನಲ್ಲಿ ನಡೆದಿದ್ದೇನು!? ಹಲ್ಲೆ ಮಾಡಿದ್ರಾ ಎನ್‌ಡಿಆರ್‌ಎಫ್‌ ಸಿಬ್ಬಂದಿ

shivamogga hosanagara news today

ಹೊಸನಗರ ಪೆಟ್ರೋಲ್‌ ಬಂಕ್‌ನಲ್ಲಿ ನಡೆದಿದ್ದೇನು!? ಹಲ್ಲೆ ಮಾಡಿದ್ರಾ ಎನ್‌ಡಿಆರ್‌ಎಫ್‌ ಸಿಬ್ಬಂದಿ
shivamogga hosanagara news today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 8, 2025 ‌‌ ‌

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಪೆಟ್ರೋಲ್‌ ಬಂಕ್‌ ಒಂದರಲ್ಲಿ ಪೆಟ್ರೋಲ್‌ ಹಾಕಿಸಲು ಬಂದ ಬಸ್‌ನಲ್ಲಿದ್ದ ಎನ್‌ಡಿಆರ್‌ಎಫ್‌ ಸಿಬ್ಬಂದಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಇಲ್ಲಿನ ಪೆಟ್ರೋಲ್‌ ಬಂಕ್‌ಗೆ ಬಂದ ಬಸ್‌ ಇನ್ನೊಂದು ಪಿಕಪ್‌ ವಾಹನಕ್ಕೆ ಡಿಕ್ಕಿಯಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಈ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. 

ನಡೆದಿದ್ದೇನು? 

ಪೆಟ್ರೋಲ್‌ ಬಂಕ್‌ಗೆ ಎಂಟ್ರಿಯಾದ ಬಸ್‌, ಅದಕ್ಕೂ ಮುಂಚೆ ಡಿಸೇಲ್‌ ಹಾಕಿಸಿಕೊಳ್ತಿದ್ದ ಪಿಕಪ್‌ ವಾಹನಕ್ಕೆ ಡಿಕ್ಕಿಯಾಗಿದೆ. ಈ ಹಿನ್ನೆಲೆಯಲ್ಲಿ ಪಿಕಪ್‌ ವಾಹನದ ಡ್ರೈವರ್‌ ಹಾಗೂ ಎನ್‌ಡಿಆರ್‌ಎಫ್‌ ಇದ್ದ ವಾಹನದ ಚಾಲಕನ ನಡುವೆ ವಾಗ್ವಾದವಾಗಿದೆ. ಆಗ ಅಲ್ಲಿದ್ದ ಕುಮಾರ್‌ ಎಂಬವರು ಪಿಕಪ್‌ ಡ್ರೈವರ್‌ಗೆ ಏಕೆ ನಿಂದಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಆಗ ಎಂಟ್ರಿಯಾದ ಎನ್‌ಡಿಆರ್‌ಎಫ್‌ ಸಿಬ್ಬಂದಿ ಕುಮಾರ್‌ನನ್ನ ಪ್ರಶ್ನಿಸಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಮೂಲದ ಎನ್‌ಡಿಆರ್‌ಎಫ್‌ ಸಿಬ್ಬಂದಿ ಹೊಸನಗರ ಅಗ್ನಿಶಾಮಕ ಸಿಬ್ಬಂದಿಗೆ ಟ್ರೈನಿಂಗ್‌ ನೀಡುವ ಸಲುವಾಗಿ ಬಂದಿದ್ದರು ಎನ್ನಲಾಗಿದೆ.