ತಂದೆ, ತಾಯಿಗೆ ಔಷಧಿ ಕೊಡಿಸಿ ಮನೆಗೆ ವಾಪಸ್‌ ಆದಾಗ ಮನೆಮಾಲೀಕರಿಗೆ ಶಾಕ್‌

shivamogga hosanagara news today, ಶಿವಮೊಗ್ಗ ಹೊಸನಗರ ಸುದ್ದಿ, ರಿಪ್ಪನ್‌ ಪೇಟೆ, ಕೋಡೂರು ಗ್ರಾಮ

ತಂದೆ, ತಾಯಿಗೆ ಔಷಧಿ ಕೊಡಿಸಿ ಮನೆಗೆ ವಾಪಸ್‌ ಆದಾಗ ಮನೆಮಾಲೀಕರಿಗೆ ಶಾಕ್‌
shivamogga hosanagara news today, ಶಿವಮೊಗ್ಗ ಹೊಸನಗರ ಸುದ್ದಿ, ರಿಪ್ಪನ್‌ ಪೇಟೆ, ಕೋಡೂರು ಗ್ರಾಮ

SHIVAMOGGA | MALENADUTODAY NEWS | ಮಲೆನಾಡು ಟುಡೆ 

Sep 28, 2024  |  HOSANAGARA NEWS |  ಹೊಸನಗರ ತಾಲ್ಲೂಕು ಕೋಡೂರು ಗ್ರಾಮದ ಗೌಡಗೊಪ್ಪದ ಮನೆಯೊಂದರಲ್ಲಿ ನಗದು ಹಾಗೂ ಬಂಗಾರದ ಆಭರಣಗಳನ್ನು ಕಳವು ಮಾಡಲಾಗಿದೆ. 

ಮನೆಯ ಹಿಂಬಾಗಿಲಿನಿಂದ ನುಗ್ಗಿದ ಕಳ್ಳರು ಬಂಗಾರದ ಚೈನ್, ಮೂರು ಚಿಕ್ಕ ಉಂಗುರ, ಒಂದು ಜತೆ ಓಲೆ, ಎರಡು ಚೈನ್‌ಗಳು, ಲಕ್ಷ್ಮಿ ಕಾಸು, ತಾಳಿ, ಮಾಂಗಲ್ಯ ಸರ ಸೇರಿ ಒಟ್ಟು 2.64 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣ ಹಾಗೂ 40 ಸಾವಿರ ಕ್ಯಾಶ್‌ ಕಳ್ಳತನ ಮಾಡಿದ್ದಾರೆ

ಮನೆ ಮಾಲೀಕರು ಮಹಾರಾಷ್ಟ್ರದ ಪುಣೆಯಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಅಲ್ಲೇ ವಾಸವಾಗಿದ್ದಾರೆ. ಇವರ ತಂದೆ ತಾಯಿ ಇಲ್ಲಿ ವಾಸವಿದ್ದರು. ತಂದೆ, ತಾಯಿಯರನ್ನು ನೋಡಿ ಕೊಂಡು ಹೋಗಲು ಬಂದಿದ್ದ ಮನೆ ಮಾಲೀಕರು, ಅವರ ವೈದ್ಯಕೀಯ ತಪಾಸಣೆಗೆಂದು ಕರೆದೊಯ್ದ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ.